ಅರಂಬೂರು ಅಂಬಿಕಾ ಮಹಿಳಾ ಮಂಡಲದ ಮಹಾಸಭೆ

0

ಅರಂಬೂರು ಅಂಬಿಕಾ ಮಹಿಳಾ ಮಂಡಲದ ಮಹಾಸಭೆಯು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಅಮಿತಾ ರೈ ಯವರ ಅಧ್ಯಕ್ಷತೆಯಲ್ಲಿ ಗೋಪಾಲಕೃಷ್ಣ ಸಭಾಭವನದಲ್ಲಿ ಆ.27 ರಂದು ನೆರವೇರಿತು. ಶ್ರೀಮತಿ ಸತ್ಯಭಾಮಾ ಭಟ್ ರವರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭ ವಾಯಿತು.2022 – 2023ನೇ ಸಾಲಿನ ವಾರ್ಷಿಕ ವರದಿಯನ್ನು ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ ವೇದಾವತಿ ಓದಿದರು. ಸಭೆ ಇದಕ್ಕೆ ಅನುಮೋದನೆ ನೀಡಿತು.2022 – 2023ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಮಂಡನೆಯನ್ನು ಮಹಿಳಾ ಮಂಡಲದ ಖಜಾಂಜಿ ಶ್ರೀಮತಿ ಹಾರಾವತಿಯವರು ಮಂಡಿಸಿದರು.
ಸದಸ್ಯೆಯರಿಂದ ಇದಕ್ಕೆ ಅನುಮೋದನೆ ಸಿಕ್ಕಿತು. ಮುಂದಿನ ವರ್ಷಕ್ಕೂ ಇದೇ ಕಮಿಟಿಯನ್ನು ಮುಂದುವರಿಸುವುದಾಗಿ ಸಭೆಯಲ್ಲಿ ನಿರ್ಣಯ ಮಾಡಲಾಯಿತು. ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಪ್ರಪುಲ್ಲ ರೈ ಯವರು ಮಹಿಳಾ ಮಂಡಲಕ್ಕೆ ಹಿತ ವಚನ ನೀಡಿದರು.
ಶ್ರೀಮತಿ ಕವಿತಾ ಸ್ವಾಗತಿಸಿ, ಶ್ರೀಮತಿ ಶೋಭಾ ರೈ ಯವರು ವಂದಿಸಿದರು. ಶ್ರೀಮತಿ ಚಂದ್ರಾವತಿಯವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸರೋಜ ರೈ ಯವರು ಅವರ ಮೊಮ್ಮಗುವಿನ ಪ್ರಯುಕ್ತ ಉಪಹಾರ ನೀಡಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.