ಸುಳ್ಯ: ಡಿ.ಜೆ ಫ್ರೆಂಡ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ

0

ಡಿ.ಜೆ ಫ್ರೆಂಡ್ಸ್ ಕ್ಲಬ್ (ರಿ.) ಸುಳ್ಯ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಇದರ ಅಂಗವಾಗಿ ನಡೆಯುವ ‘ಸುಳ್ಯ ದಸರಾ’ ಕಾರ್ಯಕ್ರಮದ
ವೈಭವ ಮೆರವಣಿಗೆಯಲ್ಲಿ ಆಕರ್ಷಣೆಯಾಗಿ 5ನೇ ವರ್ಷದ ಹುಲಿವೇಷ ಸ್ಥಬ್ದ ಚಿತ್ರ ನಿರ್ಮಾಣದ ಡಿ.ಜೆ ಫ್ರೆಂಡ್ಸ್ ಕ್ಲಬ್ ನ ಸುಳ್ಯ ನೂತನ ಪದಾಧಿಕಾರಿಗಳ ಆಯ್ಕೆಯು ಸೆ.10ರಂದು ನಡೆಯಿತು. ಸ್ಥಾಪಕಾಧ್ಯಕ್ಷ ದೀಪಕ್ ರಾಜ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಸಮಿತಿ ಅಧ್ಯಕ್ಷರಾಗಿ ದೀಕ್ಷಿತ್ ರಾವ್, ಉಪಾಧ್ಯಕ್ಷರಾಗಿ ನಿತಿನ್ ಸಾಲಿಯಾನ್, ಕಾರ್ಯದರ್ಶಿಗಳಾಗಿ ಪ್ರವೀಣ್ ಮಚಾದೋ , ಜೊತೆ ಕಾರ್ಯದರ್ಶಿಯಾಗಿ ಸಚಿನ್ ಜಾಲ್ಸೂರು, ಖಜಾಂಜಿ ಭರತ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಶಾಂತ್ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಸತ್ಯಪ್ರಸಾದ್ ಸಮಿತಿ ಸದಸ್ಯರುಗಳಾಗಿ ವಿಜಯ್ ರಾಜ್ , ದಿನೇಶ್ ಪಿ. ಎಸ್ , ತ್ರಿಶಾಂತ್ ಶೆಟ್ಟಿ , ರೋಹಿತ್ ಪೂಜಾರಿ , ರಕ್ಷಿತ್ , ನೂತನ್ ಪೂಜಾರಿ , ರಂಜನ್ ದಾಸ್ , ನಿಶಾಂತ್ ಗೌಡ , ರಾಕೇಶ್ , ಲಕ್ಷ್ಮೀಶ ಆಚಾರ್ಯ, ಸಂದೇಶ್ , ಪ್ರಸನ್ನ ಬಿ ಟಿ, ಮಂಜುನಾಥ್ ಯಂ ಪಿ ಮತ್ತಿತ್ತರನ್ನು ಆಯ್ಕೆ ಮಾಡಲಾಯಿತು.