3.85 ಲಕ್ಷ ಮೌಲ್ಯದ ದೇಣಿಗೆ
ಕುಕ್ಕೆ ಕ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಂಗಳೂರಿನ ಜಯನಗರದ ಉದ್ಯಮಿ ವಿಕ್ರಮ ಏ.ವಿ.ಅವರು ಸೇವಾ ರೂಪದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಎರಡು ಬೃಹದಾಕಾರದ ಎಸಿಪಿ ಕಂಪನಿಯ ಸೀಲಿಂಗ್ ಫ್ಯಾನ್ ಗಳನ್ನು ಸೆ.೧೪ ರಂದು ಕೊಡುಗೆಯಾಗಿ ನೀಡಿದರು.
ಕ್ಷೇತ್ರ ಪುರೋಹಿತರಾದ ಮಧುಸೂಧನ ಕಲ್ಲೂರಾಯ ರವರು ಫ್ಯಾನುಗಳಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು .ಕೊಡುಗೆಯಾಗಿ ನೀಡಿದ ಎಸಿಪಿ ಕಂಪನಿಯ ಎರಡು ಮೆಗಾ ಸೀಲಿಂಗ್ ಸಿಲಿಂಗ್ ಫ್ಯಾನುಗಳು ೧೬ ಫೀಟು ರೆಕ್ಕೆಗಳನ್ನು ಹೊಂದಿದೆ. ಎರಡಕ್ಕೆ ಒಟ್ಟು ರೂ. ೩.೮೫ ಮೌಲ್ಯ ವೆಚ್ಚವಾಗಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಮಾಹಿತಿ ನೀಡಿದರು.
ಒಂದು ಪ್ಯಾನ್ ಅನ್ನು ದೇವಸ್ಥಾನದ ಸನ್ನಿಧಿ ಪಕ್ಕ ತುಲಾಭಾರ , ಅನ್ನಪ್ರಶನ ಮಾಡುವ ಸ್ಥಳದಲ್ಲಿಯೂ ಇನ್ನೊಂದು ಫ್ಯಾನ್ ಅನ್ನು ಶ್ರೀ ದೇವಳದ ಹೊರಾಂಗಣದ ಉತ್ತರ ದ್ವಾರದ ಭಾಗದಲ್ಲೂ ಅಳವಡಿಸಲಾಗುವುದು ಎಂದವರು ತಿಳಿಸಿದರು. ಈ ಹಿಂದೆ ಇದೇ ರೀತಿ ಎರಡು ಪ್ಯಾನ್ ಕೊಡುಗೆ ಬಂದಿದೆ ಎಂದರು.
ಈ ಸಂದರ್ಭದಲ್ಲಿ ವಿಕ್ರಂ ಹಾಗೂ ಅವರ ಪತ್ನಿಯವರನ್ನು ಶ್ರೀ ದೇವಳದ ವತಿಯಿಂದ ಗೌರವಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಉದ್ಯಮಿ ವಿಕ್ರಂ ಉಪಸ್ಥಿತರಿದ್ದರು. ಪತ್ನಿ ಶ್ರೀಮತಿ ಭೂಮಿಕ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ವನಜ.ವಿ.ಭಟ್ ಹಾಗೂ ಶೋಭಾ ಗಿರಿಧರ್ ಉಪಸ್ಥಿತರಿದ್ದರು.