ಹರಿಹರ ಪಲ್ಲತ್ತಡ್ಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ “ಆಯುಷ್ಮಾನ್ ಭವ” ಅಭಿಯಾನ ಕಾರ್ಯಕ್ರಮ

0

ಆರೋಗ್ಯ ಸೇವೆಗಳನ್ನು ಸಮುದಾಯಕ್ಕೆ ಸಂಪೂರ್ಣವಾಗಿ ತಲುಪಿಸುವ ಯೋಜನೆ

ಅಭಿಯಾನದ ಮಾದರಿಯಲ್ಲಿ ಸಮುದಾಯಕ್ಕೆ ಆರೋಗ್ಯ ಸೇವೆಗಳನ್ನು ಸಂಪೂರ್ಣವಾಗಿ ತಲುಪಿಸುವ “ಆಯುಷ್ಮಾನ್ ಭವ” ಅಭಿಯಾನದ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕ್ಷೇಮಕೇಂದ್ರ ಹರಿಹರ ಪಲ್ಲತಡ್ಕದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆ ಯನ್ನು ದೀಪ ಬೆಳಗಿಸುವುದರ ಮೂಲಕ ಪಂಚಾಯತ್ ಅಧ್ಯಕ್ಷ ವಿಜಯ ಅಂಗಣ ನೆರವೇರಿಸಿದರು.

ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಣಿಯಾನ ಪುರುಷೋತ್ತಮ , ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಬಾಳುಗೋಡು, ಪಂಚಾಯತ್ ಸದಸ್ಯೆ ಪದ್ಮಾವತಿ ಕಲ್ಲೇಮಟ, ಆರೋಗ್ಯ ಅಭಿವೃದ್ಧಿ ಅಧಿಕಾರಿ ಕು.ರೇಣುಕಾ, ಕಿರಿಯ ಆರೋಗ್ಯ ಸಹಾಯಕಿ ಮೋಹಿನಿ , ಅಂಗನವಾಡಿ ಕಾರ್ಯಕರ್ತೆ ಹರಿಣಿ , ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು,ಸಮುದಾಯ ಸಂಪನ್ಮೂಲ ವ್ಯಕ್ತಿ ದಿವ್ಯರವರು, ಹಾಗೂ ಸದಸ್ಯರು ಉಪಸ್ಥಿತರಿದ್ದರು. ಆಯುಷ್ಮಾನ್ ಮತ್ತು ಅಭಾ ಹೆಲ್ತ್ ಕಾರ್ಡ್ ಗಳ ಬಗ್ಗೆ ಮತ್ತು ಆರೋಗ್ಯದ ಬಗ್ಗೆ ಸಿ.ಎಚ್.ಒ ಮತ್ತು ಎ.ಎನ್.ಎಂ ರವರು ಮಾಹಿತಿ ನೀಡಿದರು. ಪಿಡಿಒ ಮತ್ತು ಅಧ್ಯಕ್ಷರು ಪ್ರಾಸ್ತಾವಿಕ ಮಾತನಾಡಿದರು. ಸಂಜೀವಿನಿಯ ಎಂಬಿಕೆ ವೇದಾವತಿ ಯವರು ಕಾರ್ಯಕ್ರಮ ನಿರೂಪಣೆ ಮಾಡಿ, ಆಶಾ ಕಾರ್ಯಕರ್ತೆ ಪುಷ್ಪಾವತಿಯವರು ವಂದಿಸಿ, ಕು.ಅಕ್ಷಯಾ ಕೆ. ಜೆ. ಪ್ರಾರ್ಥಿಸಿದರು.