ಸುಳ್ಯದಲ್ಲಿ ಕಳೆದ ಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಮೂಡಿರುವ ಗೊಂದಲ ಮತ್ತು ಇತ್ತೀಚಿಗೆ ಕೆಲವೊಂದು ಸಮಿತಿಗಳಿಗೆ ಬಿಜೆಪಿಯವರನ್ನು ಮತ್ತು ಕಾಂಗ್ರೆಸೇತರ ವ್ಯಕ್ತಿಗಳಿಗೆ ನಾಮನಿರ್ದೇಶನ ಮಾಡಿರುವುದು ಹಾಗು ಬಿಜೆಪಿಯವರಿಗೆ ಅನುಕೂಲ ವಾಗುವ ಹಾಗೆ ಅಧಿಕಾರಿಗಳನ್ನು ವರ್ಗಾವಣೆ ಗೊಳಿಸಿರುವುದು, ಹಾಗು ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿರುವ ಮತ್ತು ಸುಳ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆತ್ಮವಿಶ್ವಾಸಕ್ಕೆ ಕುಂದು ಬರುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚಿಸಿ ಸುಳ್ಯದಲ್ಲಿ ಕಾಂಗ್ರೆಸ್ ಉಳಿಸುವ ಬಗ್ಗೆ ಸೆ.18 ರಂದು ಸುಳ್ಯ ಲಯನ್ಸ್ ಕ್ಲಬ್ ನಲ್ಲಿ “ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು”ಹೆಸರಿನಲ್ಲಿ ಸಭೆ ಕರೆಯಲಾಗಿದೆ.
ಟೀಮ್ ಇಂಡಿಯಾ ಕಾನ್ಸೆಪ್ಟ್ ಬಗ್ಗೆ ಈ ಸಭೆಯಲ್ಲಿ ವಿಚಾರ ವಿನಿಮಯ ನಡೆಯಲಿದೆ.ಎಂದು ತಿಳಿದುಬಂದಿದೆ.