ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಸಂಘ (CENSA)ದ ಉದ್ಘಾಟನೆ

0

ಕ್ರಿಯಾಶೀಲತೆ ವಿದ್ಯಾರ್ಥಿ ಜೀವನದಲ್ಲಿ ಅತೀ ಮುಖ್ಯ: ರಂಜಿತ್ ಎನ್.ಆರ್.

ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ಉತ್ಕೃಷ್ಟ ಕಲಿಕೆ ಸಾಧ್ಯ: ಡಾ. ಉಜ್ವಲ್ ಯು.ಜೆ.

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘ-ಸೆನ್ಸಾ (CENSA) 2024-25ರ ಉದ್ಘಾಟಣಾ ಕಾರ್ಯಕ್ರಮ “ಆರೋಹಿಕಾ” ನ. 15 ರಂದು ಕೆ.ವಿ.ಜಿ. ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ರಂಜಿತ್ ಎನ್.ಆರ್. ಕ್ವಾಲಿಟಿ ಇಂಜಿನಿಯರಿಂಗ್ ಲೀಡ್, ಇನ್ಫೋಸಿಸ್ ಹಾಗೂ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಹಳೆವಿದ್ಯಾರ್ಥಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಜ್ಞಾನಾರ್ಜನೆ ಮಾಡಿದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವಿಟಿಯುನ ಎಕ್ಸೆಕ್ಯೂಟಿವ್ ಕೌನ್ಸಿಲ್ ಸದಸ್ಯರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ ಯವರು ಮಾತನಾಡಿ ಪ್ರಸ್ತುತ ಕಲಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅತೀ ಅಗತ್ಯ. ಕಾಲೇಜಿನಲ್ಲಿ ಇನ್ನೂ ಹೆಚ್ಚಿನ ಅತ್ಯಾಧುನಿಕ ತಂತ್ರಜ್ಞಾನಗಳ ಜೋಡಣೆ ಹಾಗೂ ಹೊಸ ಲ್ಯಾಬ್‌ಗಳ ಅಳವಡಿಕೆ ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ.ಯವರು ವಿಭಾಗದ ವಿದ್ಯಾರ್ಥಿಗಳ ಸಾಧನೆಗಳನ್ನು ಪ್ರಶಂಶಿಸಿ, ವಿದ್ಯಾರ್ಥಿಗಳ ಎಲ್ಲಾ ಚಟುವಟಿಕೆಗಳಿಗೆ ಕಾಲೇಜು ಸಂಪೂರ್ಣ ಸಹಕಾರ ನೀಡುತ್ತದೆ ಎಂದರು.

ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶಾಶ್ವತ್ ಕೆ ಸ್ವಾಗತಿಸಿ, ಹರ್ಷದ್ ಕೆ., ಜತೆ ಕಾರ್ಯದರ್ಶಿ ವಿದ್ಯಾರ್ಥಿ ಸಂಘ (CENSA)ದ್ದ ಬಗ್ಗೆ ವಿವರಿಸಿದರು. ಸುರಭಿ ಟಿ. ವಂದಿಸಿದರು. ಸಂಯೋಜಕರಾದ ಪ್ರೊ. ಕಿಶೋರ್ ಕುಮಾರ್ ಕೆ.. ಪ್ರೊ. ವೆಂಕಟೇಶ ಯು.ಸಿ. ಹಾಗೂ ಕೋಶಾಧಿಕಾರಿ ಡಾ. ಸವಿತಾ ಸಿ.ಕೆ., ಸೆನ್ನಾ ಸಲಹೆಗಾರರಾದ ಡಾ. ಪ್ರಜ್ಞ ಎಂ.ಆರ್ ಹಾಗೂ ಪ್ರೊ. ಬಾಲಪ್ರದೀಪ್ ಕೆ.ಎನ್. ವಿಭಾಗದ ಎಲ್ಲಾ ಉಪನ್ಯಾಸಕರು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಲಿಪ್ತಿ ಮತ್ತು ಮೋಹಿತ್ ಕಾರ್ಯಕ್ರಮ ನಿರೂಪಿಸಿದರು.