ಚೆಡಾವು ಅಪಘಾತದ ಗಂಭೀರ ಗಾಯಾಳು ಮಹಿಳೆ ಮೃತ್ಯು

0

ಸಂಪಾಜೆಯ ಚೆಡಾವು ಬಳಿ ಸಂಭವಿಸಿದ ಕಂಟೈನರ್ ಹಾಗೂ ಸ್ಕೂಟಿ ಪರಸ್ಪರ ಢಿಕ್ಕಿಯಾಗಿ ಸ್ಕೂಟಿ ಸವಾರರ ಪೈಕಿ ಓರ್ವ ಮೃತಪಟ್ಟಿದ್ದು, ಇದೀಗ ಗಂಭೀರ ಗಾಯಗೊಂಡ ಸಹಸವಾರೆ ಮಹಿಳೆಯೂ ಮೃತಪಟ್ಟರೆಂದು ತಿಳಿದು ಬಂದಿದೆ.

ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಹಾಗೂ ಸುಳ್ಯಕ್ಕೆ ಬರುತ್ತಿದ್ದ ಸ್ಕೂಟಿ ಪರಸ್ಪರ ಸಂಪಾಜೆಯ ಚೆಡಾವು ಬಳಿ ಡಿಕ್ಕಿಯಾಯಿತು. ಪರಿಣಾಮ ಓರ್ವ ಸ್ಕೂಟಿ ಸವಾರ ಮೃತಪಟ್ಟರು. ಸಹಸವಾರೆಯಾಗಿದ್ದ ಮಹಿಳೆಗೂ ಗಂಭೀರ ಗಾಯಗಳಾಗಿದ್ದು, ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತರಲಾಗಿತ್ತು. ಇದೀಗ ಗಂಭೀರ ಗಾಯಗೊಂಡಿದ್ದ ಮಹಿಳೆಯೂ ಮೃತಪಟ್ಟರೆಂದು ತಿಳಿದು ಬಂದಿದೆ.


ಕೊಡಗು ಜಿಲ್ಲೆಯ
ಸಿದ್ದಾಪುರದ ನೆಲ್ಲಿಹುದುಕೇರಿ ಎಂ. ಚಿದಾನಂದ ಆಚಾರ್ಯ ಮೃತಪಟ್ಟ ವ್ಯಕ್ತಿ. ಮಹಿಳೆಯ ಹೆಸರು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.