ಸಂಸದ ಸಾಗರ್ ಖಂಡ್ರೆಯಿಂದ ತುಲಾಭಾರ ಸೇವೆ
ಕರ್ನಾಟಕ ರಾಜ್ಯ ಸರಕಾರದ ಅರಣ್ಯ ಸಚಿವ ಈಶ್ವರ
ಕುಕ್ಕೆಶ್ರೀ ಸುಬ್ರಹ್ಮಣ್ಯ ಡಿ.23 ರಂದು ಆಗಮಿಸಿದರು. ಡಿ.24 ರಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿಯಾಗಿ ದೇವರ ದರ್ಶನ ಪಡೆದರು. ಸಂಸದ ಸಾಗರ್ ಖಂಡ್ರೆಯಿಂದ ತಲಾಭಾರ ಸೇವೆ ಮಾಡಿಸಿದರು.
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಗ್ಗೆ ಆಶ್ಲೇಷ ಪೂಜೆ ಮಾಡಿಸಿದ್ದಾರೆ. ಈಶ್ವರ ಖಂಡ್ರೆ ಅವರ ಪುತ್ರ ಸಂಸದ ಸಾಗರ್ ಖಂಡ್ರೆ ತುಲಾ ಭಾರ ಸೇವೆ ನೆರವೇರಿಸಿದರು. ಬೆಲ್ಲ, ಬೇಳೆ, ತೆಂಗಿನಕಾಯಿಯಲ್ಲಿ ತುಲಾಭಾರ ಮಾಡಿಸಿದರು.ಅ
ದೇವಸ್ಥಾನಕ್ಕೆ ಆಗಮಿಸಿದ ಅವರನ್ನು, ದೇವಸ್ಥಾನ ವತಿಯಿಂದ ಸ್ವಾಗತಿಸಲಾಯಿತು. ಅರಣ್ಯ ಇಲಾಖೆಯ ಡಿಸಿಎಫ್ ಆಂತೋಣಿ ಮರಿಯಪ್ಪ, ಎಸಿಎಫ್ ಪ್ರವೀಣ್ ಕುಮಾರ್, ಆರ್ ಎಫ್ಒಗಳಾದ ವಿಮಲ್ ಬಾಬು, ಮಂಜುನಾಥ್, ಸಂದ್ಯಾ, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮತ್ತಿತರರು ಉಪಸ್ಥಿತರಿದ್ದರು. ಡಾ. ರಘು, ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಶೆಟ್ಟಿ, ಸುಬ್ರಹ್ಮಣ್ಯದ ಹರೀಶ್ ಇಂಜಾಡಿ, ಶಿವರಾಮ ರೈ, ರವೀಂದ್ರ ಕುಮಾರ್ ರುದ್ರಪಾದ, ಕಿಶೋರ್ ಅರಂಪಾಡಿ, ಸುರೇಶ್ ಉಜಿರಡ್ಕ, ದೇವಸ್ಥಾನದ ಪಿ.ಆರ್.ಒ ಜಯರಾಮ ರಾವ್ ಮತ್ತಿತರರು ಉಪಸ್ಥಿತರಿದ್ದರು.