ಸುಳ್ಯ,ಕಡಬ ತಾಲೂಕು ವ್ಯಾಪ್ತಿಯ 16 ಮಸೀದಿಗಳ ಖಾಝಿಯಾಗಿ ಇಂಡಿಯನ್ ಗ್ರಾಂಡ್ ಮುಫ್ತಿ ಎ ಪಿ ಅಬೂಬಕ್ಕರ್ ಉಸ್ತಾದ್ ಅಧಿಕಾರ ಸ್ವೀಕಾರ

0

ಉಡುಪಿ ಹಾಗೂ ದ ಕ ಜಿಲ್ಲಾ ಸಂಯುಕ್ತ ಖಾಝಿ ಮಾಣಿ ಉಸ್ತಾದ್, ಹಿರಿಯ ವಿದ್ವಾಂಸ ಒಲೆಮುಂಡೋವು ಉಸ್ತಾದ್ ರವರು ಉಪಸ್ಥಿತಿ

ಸುಳ್ಯ ತಾಲೂಕಿನ 15 ಹಾಗೂ ಕಡಬ ತಾಲೂಕು ವ್ಯಾಪ್ತಿಯ 2 ಮಸೀದಿಗಳು ಸೇರಿದಂತೆ ಒಟ್ಟು 17 ಮಸೀದಿಗಳ ಖಾಝಿಯಾಗಿ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ರವರು ಖಾಝಿಯಾಗಿ ಅಧಿಕಾರ ಸ್ವೀಕರಿಸಿಕ್ಕೊಂಡರು.

ಸುಳ್ಯದ ಗಾಂಧಿನಗರ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ಆಶ್ರಯದಲ್ಲಿ ಜ 30 ರಂದು ನಡೆದ ಖಾಝಿ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಖಾಝಿ ಸ್ಥಾನವನ್ನು ಅಲಂಕರಿಸಿಕ್ಕೊಂಡರು.

ಈ ಸಂಧರ್ಭ ದಲ್ಲಿ ಸುಳ್ಯ ಗಾಂಧಿ ನಗರ ಜುಮ್ಮಾ ಮಸ್ಜಿದ್,ಗೂನಡ್ಕ ಬದ್ರಿಯಾ ಜುಮ್ಮಾ ಮಸ್ಜಿದ್,ಪೆರಾಜೆ ಮುಹಿಯ್ಯದ್ದಿನ್ ಜುಮ್ಮಾ ಮಸ್ಜಿದ್,ಕುಂಭಕ್ಕೋಡು ಸುನ್ನಿ ಜುಮ್ಮಾ ಮಸ್ಜಿದ್,ಮುಹಿಯದ್ದಿನ್ ಜುಮ್ಮಾ ಮಸ್ಜಿದ್ ಪೈಂಬೆಚ್ಚಾಲು,ಅಹ್ಮದುಲ್ ಬದವಿ ಜುಮ್ಮಾ ಮಸ್ಜಿದ್ ಸುಣ್ಣಮೂಲೆ,ಬದ್ರಿಯಾ ಜುಮ್ಮಾ ಮಸ್ಜಿದ್ ಗುತ್ತಿಗಾರು,ಬದ್ರಿಯಾ ಜುಮ್ಮಾ ಮಸ್ಜಿದ್ ಇಂದ್ರಾಜೆ,ಬದ್ರಿಯಾ ಜುಮ್ಮಾ ಮಸ್ಜಿದ್ ನಿಂತಿಕ್ಕಲ್ಲು, ಖಿಲರ್ ಜುಮ್ಮಾ ಮಸ್ಜಿದ್ ಕರಿಂಬಿಲ,ಬದ್ರಿಯಾ ಜುಮ್ಮಾ ಮಸ್ಜಿದ್ ನೆಕ್ಕಿಲ ಪಂಜ,ಬಿಲಾಲ್ ಜುಮ್ಮಾ ಮಸ್ಜಿದ್ ಮೇನಾಲ ಅಜ್ಜವರ, ಗೌಷಿಯಾ ಜುಮ್ಮಾ ಮಸ್ಜಿದ್ ಅಲೆಕ್ಕಾಡಿ,ಬದ್ರಿಯಾ ಜುಮ್ಮಾ ಮಸ್ಜಿದ್ ಪುಂಚತ್ತಾರು,ರಹ್ಮಾನಿಯ ಜುಮ್ಮಾ ಮಸ್ಜಿದ್ ಕೊಡಿಂಬಾಲ,ಮಸ್ಜಿದ್ ಅಬೂಬಕ್ಕರ್ ಸಿದ್ದೀಕ್ ಪಳ್ಳಿಮಜಲು ಈ ಎಲ್ಲಾ ಮಸೀದಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸದಸ್ಯರು ಗಳು ಉಪಸ್ಥಿತರಿದ್ದು ಬಹಿಯ್ಯತ್ ಸ್ವೀಕರಿಸಿದರು.

ಹಿರಿಯ ಪಂಡಿತರುಗಳಾದ ದ.ಕ ಹಾಗೂ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಝೖನುಲ್ ಉಲಮಾ ಮಾಣಿ ಉಸ್ತಾದ್ ರವರು ಭೋದನೆ ವಾಚಿಸಿದರು.

ವೇದಿಕೆಯಲ್ಲಿ ಹಿರಿಯ ವಿದ್ವಾಂಸರಾದ ಶೈಖುನಾ ಒಲೆಮುಂಡೋವು ಉಸ್ತಾದ್ ಉಪಸ್ಥಿತರಿದ್ದರು.

ಸಯ್ಯಿದ್ ಕುಂಞಿ ಕೋಯ ಸಅದಿ ತಂಙಳ್ ಸುಳ್ಯ ದುವಾ ನೆರವೇರಿಸಿದರು. ಗಾಂಧಿ ನಗರ ಜುಮ್ಮಾ ಮಸ್ಜಿದ್ ಖತೀಬರಾದ ಅಲ್ ಹಾಜ್ ಆಶ್ರಫ್ ಖಾಮಿಲ್ ಸಖಾಫಿ ಯವರು ಪ್ರಾಸ್ತವಿಕ ಮಾತನಾಡಿ ಖಾಝಿಯವರ ಹುದ್ದೆಯ ಮಹತ್ವ ಮತ್ತು ಅದರ ಆವಶ್ಯಕತೆ ಕುರಿತು ಮಾಹಿತಿ ನೀಡಿದರು.

ಹಿರಿಯ ವಿದ್ವಾಂಸರಾದ ಝೖನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾರೈಸಿದರು.

ಖಾಝಿ ಪಟ್ಟ ಬಹಳ ಸೂಕ್ಷ್ಮ ಮತ್ತು ಜವಾಬ್ದಾರಿಯುತ :ಎ ಪಿ ಉಸ್ತಾದ್

ಖಾಝಿ ಪಟ್ಟ ಸ್ವೀಕರಿಸಿ ಮಾತನಾಡಿದ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ರವರು ಖಾಝಿ ಎಂಬ ಹುದ್ದೆ ಬಹಳ ಸೂಕ್ಷ್ಮ ಮತ್ತು ಜವಾಬ್ದಾರಿಯುತ ಸ್ಥಾನ ವಾಗಿದೆ. ಸಂಶುಲ್ ಉಲಮಾ ಉಳ್ಳಾಲ ತಂಙಳ್ ರವರು ವಹಿಸಿದ್ದ ಈ ಸ್ಥಾನವನ್ನು ಅವರ ಬಳಿಕ ಅವರ ಪುತ್ರರಾದ ಸಯ್ಯಿದ್ ಕೂರತ್ ತಂಙಳ್ ನಿರ್ವಹಿಸುತ್ತಿದ್ದರು.
ಇದೀಗ ಅವರ ನಿಧನದ ಬಳಿಕ ಸುಳ್ಯದ ಜಮಾಅತರು ಈ ಜವಾಬ್ದಾರಿಯನ್ನು ನನಗೆ ನೀಡಿದ್ದೀರ.ಹಿರಿಯರ ಆಶೀರ್ವಾದ ಮತ್ತು ದೀನಿಗಾಗಿ ಸೇವೆ ಸಲ್ಲಿಸುವ ಭಾಗ್ಯವೆಂದು ತಿಳಿದು ನಾನು ಈ ಸ್ಥಾನವನ್ನು ಒಪ್ಪಿಕ್ಕೊಂಡಿದ್ದೇನೆ. ಆದ್ದರಿಂದ ಪ್ರತಿಯೊಂದು ಆಡಳಿತ ಸಮಿತಿಯವರು ಇಸ್ಲಾಮಿನ ಆದರ್ಶ ತತ್ವಗಳನ್ನು ಪಾಲಿಸಿ ತಮ್ಮ ತಮ್ಮ ಕರ್ತವ್ಯಗಳನ್ನು ಪಾಲಿಸಬೇಕೆಂದು ಹೇಳಿದರು.

ವೇದಿಕೆಯಲ್ಲಿ ಸಯ್ಯಿದ್ ಝೖನುಲ್ ಆಭಿದೀನ್ ತಂಙಳ್ ಜಯನಗರ, ತ್ವಾಹಿರ್ ತಂಙಳ್, ಗಾಂಧಿನಗರ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆ ಎಂ ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಹಾಜಿ ಮೊಹಿದೀನ್ ಫ್ಯಾನ್ಸಿ,ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್,ಮಾಜಿ ಅಧ್ಯಕ್ಷ ಹಾಜಿ ಕೆ ಬಿ ಮಹಮ್ಮದ್,ಉಪಾಧ್ಯಕ್ಷ ಹಮೀದ್ ಬೀಜ ಕೊಚ್ಚಿ, ಸುಳ್ಯ ತಾಲೂಕು ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ,ಮುಖಂಡರುಗಳಾದ ಹಾಜಿ ಅಬ್ದುಲ್ ಮಜೀದ್ ಜನತಾ, ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್, ಹಾಜಿ ಕೆ ಬಿ ಇಬ್ರಾಹಿಂ,ಎಸ್ ಸಂಶುದ್ದೀನ್ ಅರಂಬೂರು,ಹಾಜಿ ಐ ಇಸ್ಮಾಹಿಲ್, ಹಾಜಿ ಅಬ್ದುಲ್ ಗಫುರ್,ಹಾಜಿ ಹಮೀದ್ ಜನತಾ,ಇಬ್ರಾಹಿಂ ಸಖಾಫಿ ಪುಂಡೂರು,ಮುದರ್ರಿಸ್ ಇರ್ಫಾನ್ ಸಖಾಫಿ ಅಲ್ ಇಕಮಿ, ಸದರ್ ಮುಅಲ್ಲಿಮ್ ಸಿರಾಜುದ್ದೀನ್ ಸಖಾಫಿ,ಸುಳ್ಯ ನ ಪಂ ಸದಸ್ಯರುಗಳಾದ ಶರೀಫ್ ಕಂಠಿ, ಉಮ್ಮರ್ ಕೆ ಎಸ್, ರಿಯಾಜ್ ಕಟ್ಟೆಕ್ಕಾರ್ಸ್, ನಾಮನಿರ್ದೇಶಕ ಸದಸ್ಯ ಸಿದ್ಧಿಕ್ ಕೊಕ್ಕೋ,ಹಾಗೂ ಇನ್ನಿತರ ಉಲಮಾಗಳು ಉಮರಾ ನೇತಾರರು ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷ ಹಾಜಿ ಮುಸ್ತಫಾ ಜನತಾ ಕೆ ಎಂ ಸ್ವಾಗತಿಸಿ ಸಮಿತಿಯ ಕಾರ್ಯದರ್ಶಿ ಕೆ ಬಿ ಅಬ್ದುಲ್ ಮಜೀದ್ ಹಾಗೂ ರಿಹಾನ್ ಸಅದಿ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.ಸಮಿತಿ ಸದಸ್ಯ ಕೆ ಎಸ್ ಉಮ್ಮರ್ ವಂದಿಸಿದರು.