ವಳಲಂಬೆ :ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಗಣೇಶೋತ್ಸವ

0

ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಳಲಂಬೆ ವತಿಯಿಂದ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೋಶೋತ್ಸವ ಸೆ.19 ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ವಳಲಂಬೆ ಇಲ್ಲಿ ನಡೆಯಲಿದ್ದು,

ಬೆಳಗ್ಗೆ ಗಣಪತಿ ಪ್ರತಿಷ್ಠೆ, ಬಳಿಕ ಸಾಮೂಹಿಕ ಗಣಪತಿ ಹೋಮ ನಡೆದು, ಅಕ್ಷರಾಭ್ಯಾಸ ಮತ್ತು ಮಕ್ಕಳಿಗೆ ಕಿವಿ ಚುಚ್ಚುವ ಕಾರ್ಯಕ್ರಮ ಜರುಗಲಿದೆ.

ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದೇಶಭಕ್ತಿಗೀತೆ, ಭಕ್ತಿಗೀತೆ, ಗಣೇಶನ ಚಿತ್ರ ಬಿಡಿಸುವುದು ಸ್ಪರ್ಧೆ ನಡೆಯಲಿದ್ದು, ಸಾರ್ವಜನಿಕ ಪುರುಷರಿಗೆ ಭಕ್ತಿಗೀತೆ, ಹಗ್ಗಜಗ್ಗಾಟ ಹಾಗೂ ಸಾರ್ವಜನಿಕ ಮಹಿಳೆಯರಿಗೆ – ಭಕ್ತಿಗೀತೆ, ಬಾಲ್ ಪಾಸಿಂಗ್, ಹಗ್ಗಜಗ್ಗಾಟ ಜರುಗಲಿದೆ.
ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆದು ಅಪರಾಹ್ನ 3.00 ರಿಂದ ಶ್ರೀಗಣೇಶ ಮೂರ್ತಿಯ ವಿಜ್ರಂಭಣೆಯ ಶೋಭಾಯಾತ್ರೆ ನಡೆದು ಮೂರ್ತಿಯ ಜಲಸ್ತಂಭನ ನೆರವೇರಲಿದೆ.