ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ-ರಜತ‌ ಸಂಭ್ರಮದ ಸಭಾ ಕಾರ್ಯಕ್ರಮ

0

ಮಾನವೀಯ ಧರ್ಮದ ಅನುಷ್ಠಾನವೇ ಶ್ರೇಷ್ಠ ಕಾರ್ಯ -ಜಯಪ್ರಕಾಶ್ ಎಂ.ಆರ್

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ-2023 ಇದರ ವತಿಯಿಂದ
ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ-ರಜತ ಸಂಭ್ರಮ ಪ್ರಯುಕ್ತ ಸೆ.20 ರಂದು ಎರಡನೇ ದಿನದ ‌ಸಭಾ ಕಾರ್ಯಕ್ರಮ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.

ಅರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹವ್ಯಾಸಿ ಯಕ್ಷಗಾನ ಅರ್ಥದಾರಿ ಜಯಪ್ರಕಾಶ್ ಎಂ ಆರ್ ಉಪನ್ಯಾಸ ನೀಡಿ
“. ಭಾರತೀಯ ಸಂಸ್ಕೃತಿ ವಿಶಿಷ್ಟ ಮೌಲ್ಯಗಳನ್ನು ಒಳಗೊಂಡ ಸಂಸ್ಕೃತಿ. ಇಲ್ಲಿನ ಆಚರಣಾ ಪದ್ಧತಿಗಳು ಅನುಸರಣ ಯೋಗ್ಯವಾದುದು. ಸನಾತನ ಹಿಂದೂ ಸಂಸ್ಕೃತಿಯ ಜೀವಾಳವೇ ಎಲ್ಲರನ್ನೂ ಒಂದುಗೂಡಿಸಿ ಬದುಕುವುದು. ಮಾನವೀಯ ಧರ್ಮದ ಅನುಷ್ಠಾನವೇ ಶ್ರೇಷ್ಠ ಕಾರ್ಯ ಎಂದು ಹೇಳಿದರು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯ ಅಧ್ಯಕ್ಷ ಸವಿತಾರ ಮುಡೂರು ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಉದ್ಯಮಿ ಡಿ ಕಿರಣ್ ಚಂದ್ರ ಪಾಲ್ಗೊಂಡಿದ್ದರು. ಆರಾಧನಾ ಸಮಿತಿ ಗೌರವಾಧ್ಯಕ್ಷ ಜಾಕೆ ಮಾಧವ ಗೌಡ, ಅಧ್ಯಕ್ಷ ಚಿನ್ನಪ್ಪ ಸಂಕಡ್ಕ , ಕಾರ್ಯದರ್ಶಿ ತೀರ್ಥಾನಂದ ಕೊಡೆಂಕಿರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಜಯರಾಮ ಕಂಬಳ, ಶ್ರೀಮತಿ ಗಿರಿಜಾ ಕೆದಿಲ, ಶ್ರೀಮತಿ ರುಕ್ಮಿಣಿ ಕುಳ, ಶರತ್ ಕುದ್ವ ಬಹುಮಾನ ವಿತರಿಸಿದರು.


ಕಾರ್ಯಕ್ರಮದಲ್ಲಿ ಚಿನ್ನಪ್ಪ ಸಂಕಡ್ಕ ಸ್ವಾಗತಿಸಿದರು‌. ಗುರುಪ್ರಸಾದ್ ತೋಟ ನಿರೂಪಿಸಿದರು. ಸತೀಶ್ ಪಂಜ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.ಪವನ್ ಪಲ್ಲತ್ತಡ್ಕ ವಂದಿಸಿದರು.

ಪೂರ್ವಾಹ್ನ ಬೆಳಗಿನ ಪೂಜೆ, ಕೇನ್ಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ , ಅಳ್ಪೆ ಚಿಂಗಾಣಿ ಗುಡ್ಡೆ ಶ್ರೀ ವಿಷ್ಣು ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಸಂಜೆ ಪಂಜ ವನಿತಾ ಮಹಿಳಾ ಭಜನಾ ಮಂಡಳಿ,ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳಿಂದ ಭಜನಾ ಸಂಕೀರ್ತನೆ.
ರಾತ್ರಿ ಮಹಾ ಪೂಜೆ, ಪ್ರಸಾದ ವಿತರಣೆ ಜರುಗಿತು.


ಸಾಂಸ್ಕೃತಿಕ ಕಾರ್ಯಕ್ರಮ :
ಸಂಜೆ ಜೀವನ್ ಬೆಳ್ಳಾರೆ ನಿರ್ದೇಶನದ ಡ್ಯಾನ್ಸ್ & ಬೀಟ್ ನೃತ್ಯ ಕಲಾ ಕೇಂದ್ರ ಪಂಜ ಪ್ರಸ್ತುತಿಯ ನೃತ್ಯ ವೈವಿಧ್ಯ. ಸಂಗೀತ ವಿದ್ಯಾನಿಧಿ ಡಾ.ವಿದ್ಯಾಭೂಷಣ ಬೆಂಗಳೂರು ಪ್ರಸ್ತುತಿಯ ಭಕ್ತಿ ಗಾನ ಸುಧೆ ನಡೆಯಿತು.

ಸೆ .21: ಶೋಭಾಯಾತ್ರೆ ಜಲಸ್ತಂಭನ:
ಸೆ. 21ರಂದು ಪೂರ್ವಾಹ್ನ ಗಂಟೆ 8.15 ರಿಂದ ಬೆಳಗಿನ ಪೂಜೆ, ನಾಗತೀರ್ಥ ಪಂಚಲಿಂಗೇಶ್ವರ ಭಜನಾ ಮಂಡಳಿ , ಓಂಕಾರ ಭಜನಾ ಮಂಡಳಿ ಎಣ್ಮೂರು ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ.


ಸಂಜೆ ಗಂಟೆ 3ರಿಂದ ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪಂಜ ಹೊಳೆಯ ನಾಗತೀರ್ಥ ಸಂಗಮದಲ್ಲಿ ಜಲಸ್ತಂಭನ ಜರುಗಲಿದೆ. ಶೋಭಾಯಾತ್ರೆಯಲ್ಲಿ
ತುಳುನಾಡಿನ ಹೆಮ್ಮೆಯ ಹುಲಿ ವೇಷ, ಕೀಲು ಕುದುರೆ ,ಕುಣಿತ ಭಜನೆ
ಮೊದಲಾದ ತಂಡಗಳು ಪಾಲ್ಗೊಳ್ಳಲಿವೆ.