ವಿಕ್ರಮ ಯುವಕ ಮಂಡಲ (ರಿ.) ಬಳ್ಪ ಮತ್ತು ಶ್ರೀ ಧರ್ಮ ಶಾಸ್ತಾವೂ ಭಜನಾ ಮಂಡಳಿ (ರಿ.) ಬಳ್ಪ ಇವುಗಳ ಜಂಟಿ ಆಶ್ರಯದಲ್ಲಿ 19 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಸೆ. 17ರಂದು ಯುವಕ ಮಂಡಲದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಉಧ್ಟಾಟನೆಯನ್ನು ಬಳ್ಪ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಗಂಗಾಧರ ಪಿ.ಎಸ್ ನೆರವೇರಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಭಜನಾ ಮಂಡಳಿ ಅಧ್ಯಕ್ಷರಾದ ಸುರೇಶ್ ಆಲ್ಕಬೆ, ಪೂರ್ವಾಧ್ಯಕ್ಷರಾದ ಭಾಸ್ಕರ ಕೊರಪ್ಪಣೆ,
ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮೋಹಿನಿ ಎಂರ್ಬಿಲ, ಬಳ್ಪ ಶಾಲಾ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಶ್ರೀಮತಿ ಭವ್ಯ ಯುವಕ ಮಂಡಲದ ಅಧ್ಯಕ್ಷ ಶಶಿಧರ ಎಣ್ಣೆಮಜಲು, ಕಾರ್ಯದರ್ಶಿ ಗಗನ್ ಕಟ್ಟೆಮನೆ ಉಪಸ್ಥಿತರಿದ್ದರು.
ನಂತರ ಮಕ್ಕಳ ಶ್ರೀ ಕೃಷ್ಣ ವೇಷ ಸ್ಪರ್ಧೆ ಮತ್ತು ಶಾಲಾ ವಿಧ್ಯಾರ್ಥಿಗಳಿಗೆ ಅಟೋಟ ಸ್ಪರ್ಧೆ ಮತ್ತು ಸಾರ್ವಜನಿಕರಿಗೆ ಮೊಸರು ಕುಡಿಕೆ, ಹಗ್ಗಜಗ್ಗಾಟ, ತ್ರೋಬಾಲ್ ಲಗೋರಿ ಪಂದ್ಯಾಟ ನಡೆಯಿತು. ಸಂಜೆ ಬಹುಮಾನ ವಿತರಣೆ ಮತ್ತು ಗುಡ್ಡಗಾಡು ಓಟಗಾರ್ತಿ ಕು. ಜಸ್ಮಿತಾ ಕೊಡೆಂಕಿರಿ ಇವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಕೆಎಸ್.ಎಸ್ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ತುಕರಾಮ್ ಏನೆಕಲ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಬಳ್ಪ ಉಪವಲಯಾರಣ್ಯಧಿಕಾರಿ ಸಂತೋಷ್ ರೈ ಹಾರೈಸಿದರು. ಯುವಕ ಮಂಡಲದ ಪೂರ್ವಾಧ್ಯಕ್ಷರಾದ ಆನಂದ ಚೆನ್ನಕಜೆ, ಶಿವಕುಮಾರ್ ಎಣ್ಣೆಮಜಲು, ಜಯರಾಮ ಆಲ್ಕಬೆ, ಭಾಸ್ಕರ ಕೊರಪ್ಪಣೆ, ರಮಾನಂದ ಎಣ್ಣೆಮಜಲ, ಪ್ರಸನ್ನ ವೈ.ಟಿ, ಉಪಸ್ಥಿತರಿದ್ದರು. ಗಗನ್ ಕಟ್ಟೆಮನೆ ಸ್ವಾಗತಿಸಿ, ಮಹೇಶ್ ಗೆಜ್ಜೆ ಮತ್ತು ಜಯಪ್ರಕಾಶ್ ಎಣ್ಣೆಮಜಲು ವಂದಿಸಿದರು. ಭವಿಕಾ ಕುಳ ಪ್ರಾಥಿಸಿ, ಪ್ರಸನ್ನ ವೈ.ಟಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮವನ್ನು ರಜನೀಶ್ ಕುಳ ಮತ್ತು ಹರೀಶ್ ಆಲ್ಕಬೆ ನಿರೂಪಿಸಿದರು.