ಸುಳ್ಯ ಲಯನ್ಸ್ ಕ್ಲಬ್ ನಲ್ಲಿ ಆಟಿ ಪೊರ್ಲು 2024 ಉದ್ಘಾಟನಾ ಸಮಾರಂಭ

0

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಸುಳ್ಯ ಲಯನ್ಸ್ ಕ್ಲಬ್ ಇದರ ಸಹಯೋಗದಲ್ಲಿ ಆಟಿ ಸಂಸ್ಕೃತಿಯನ್ನು ಬಿಂಬಿಸುವ ಆಟಿ ವೈಭವದ ಆಟಿ ಪೊರ್ಲು 2024 ರ ಉದ್ಘಾಟನಾ ಸಮಾರಂಭವು ಆ.15 ರಂದು ನಡೆಯಿತು.

ಕ್ಲಬ್ ಅಧ್ಯಕ್ಷ ಲಯನ್ ರಾಮಕೃಷ್ಣ ರೈ ಯವರು ಅಧ್ಯಕ್ಷತೆ ವಹಿಸಿದ್ದರು.
ಮೆಸ್ಕಾಂ ಇಲಾಖೆಯ ನಿವೃತ್ತ ಇಂಜಿನಿಯರ್ ಲಯನ್ ಚಂದ್ರಶೇಖರ ರವರು ದೀಪ ಪ್ರಜ್ವಲಿಸಿದರು.
ವೇದಿಕೆಯಲ್ಲಿ
ಲಯನ್ ಗಂಗಾಧರ ರೈ, ಕೋಶಾಧಿಕಾರಿ ಲಯನ್ ರಮೇಶ್ ಶೆಟ್ಟಿ, ಲಯನ್ ಜಯರಾಮ ದೇರಪ್ಪಜ್ಜನಮನೆ, ಲಯನ್ ರೂಪಶ್ರೀ ಜೆ ರೈ,
ಅರೆಭಾಷೆ ಅಕಾಡೆಮಿ ಸದಸ್ಯರಾದ ಲೋಕೇಶ್ ಊರುಬೈಲು, ಲತಾ ಪ್ರಸಾದ್ ಕುದ್ಪಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗೌಡರ ಯುವ ಸೇವಾ ಸಂಘದ ಪದಾಧಿಕಾರಿಗಳು, ಲಯನ್ಸ್ ಮತ್ತು ಲಯನೆಸ್ ಕ್ಲಬ್ ಸದಸ್ಯರು ಭಾಗವಹಿಸಿದರು. ಲಯನ್ ಜಯರಾಮ ದೇರಪ್ಪಜ್ಜನಮನೆ ಸ್ವಾಗತಿಸಿ, ಲಯನ್ ಚಂದ್ರಾವತಿ ಬಡ್ಡಡ್ಕ ವಂದಿಸಿದರು. ಲಯನ್ ರೂಪಶ್ರೀ ಜೆ. ರೈ ಕಾರ್ಯಕ್ರಮ ನಿರೂಪಿಸಿದರು.