
ಕೇಂದ್ರ ರಸ್ತೆ ಮತ್ತು ಮೂಲ ಸೌಕರ್ಯ ನಿಧಿ (CRIF) ಅಡಿಯಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ನಿಂತಿಕಲ್ಲು-ಬೆಳ್ಳಾರೆ-ನೆಟ್ಟಾರು ರಸ್ತೆ (ಅಂದಾಜು ಮೊತ್ತ ೩೭೨.೦೦ ಲಕ್ಷ) ಹಾಗೂ ಸುಳ್ಯ-ಪೈಚಾರು-ಬೆಳ್ಳಾರೆ ರಸ್ತೆ (ಅಂದಾಜು ಮೊತ್ತ ೨೨೮.೦೦ಲಕ್ಷ) ಡಾಮರೀಕರಣದ ಕಾಮಗಾರಿಗೆ ಇಂದು ಎ. 15ರಂದು ನಿಂತಿಕಲ್ಲಿನಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದಸ ಕ್ಯಾ. ಬ್ರಿಜೇಶ್ ಚೌಟ, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ರಾಕೇಶ್ ರೈ ಕೆಡಿಂಜಿ, ಹರೀಶ್ ಕಂಜಿಪಿಲಿ, ವಿನಯ್ ಕುಮಾರ್ ಕಂದಡ್ಕ, ಲಕ್ಷ್ಮೀನಾರಾಯಣ ನಡ್ಕ, ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ವನಿತಾ ಸುವರ್ಣ, ಕಳಂಜ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಇಇ ಜಿತೇಂದ್ರ ಉಪಸ್ಥಿತರಿದ್ದರು.

ಚಂದ್ರಶೇಖರ ಪನ್ನೆ ಸ್ವಾಗತಿಸಿ, ಅನೂಪ್ ಬಿಳಿಮಲೆ ವಂದಿಸಿದರು. ಅಜಿತ್ ಕುಮಾರ್ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿದರು.

