ವಳಲಂಬೆ ದೇವಸ್ಥಾನದಲ್ಲಿ ವಸಂತ ವೇದ ಶಿಬಿರ ಮತ್ತು ಗಾಯತ್ರೀ ಯಜ್ಞ ಉದ್ಘಾಟನೆ

0

ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇಲ್ಲಿ ಅನೂಚಾನ ವಿದ್ಯಾ ಪ್ರತಿಷ್ಠಾನ ಗುತ್ತಿಗಾರು ವತಿಯಿಂದ ಏ. 15ರಂದು ವಸಂತ ವೇದ ಶಿಬಿರ ಮತ್ತು ಗಾಯತ್ರೀ ಯಜ್ಞ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬಿ.ಕೆ. ಶ್ರೀಕೃಷ್ಣ ಭಟ್ ಗುಂಡಿಮಜಲು ವಹಿಸಿದ್ದರು. ವೇದಿಕೆಯಲ್ಲಿ ವೇದಮೂರ್ತಿ ಕರುವಜೆ ಕೇಶವ ಜೋಯಿಸ, ಮೇದಮೂರ್ತಿ ಮಹಾಬಲೇಶ್ವರ ಭಟ್, ಚಣಿಲ ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು, ಶಿವಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಸುಬ್ರಹ್ಮಣ್ಯ ಭಟ್ ವಂದಿಸಿದರು. ಶಿವರಾಮ ಕರುವಜೆ ಕಾರ್ಯಕ್ರಮ ನಿರೂಪಿಸಿದರು.