ಸಂಸ್ಕಾರವಾಹಿನಿ ಶಿಬಿರದಿಂದ ಸಂಸ್ಕಾರಯುತ ಜೀವನ; ಡಾ.ಅನುರಾಧ ಕುರುಂಜಿ
ಸುಳ್ಯ ಹಳೆಗೇಟು ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಎ.11ರಿಂದ 15 ರವರೆಗೆ ಹಮ್ಮಿಕೊಂಡ ಸಂಸ್ಕಾರವಾಹಿನಿ -2025 ಶಿಬಿರದ ಸಮಾರೋಪ ಸಮಾರಂಭ ಇಂದು ನಡೆಯಿತು.

ಸಮಾರೋಪ ಭಾಷಣ ಮಾಡಿದ ಸುಳ್ಯ ಎನ್ನೆಂಸಿಯ ಕನ್ನಡ ಉಪನ್ಯಾಸಕಿ ಡಾ.ಅನುರಾಧ ಕುರುಂಜಿ ಮಾತನಾಡಿ ಮಕ್ಕಳು ಸಂಸ್ಕೃತಿ, ಸಂಸ್ಕಾರಯುತ ಜೀವನವನ್ನು ನಡೆಸಲು ಇಂತಹ ಶಿಬಿರಗಳು ಸಹಕಾರಿ.ಸಂಸ್ಕಾರ ವಾಹಿನಿ ಶಿಬಿರಗಳಿಂದ ಸಂಸ್ಕಾರಯುತ ಜೀವನ ಸಾಧ್ಯವಾಗುತ್ತದೆ.
ಮಕ್ಕಳಿಗೆ ತಂದೆ ತಾಯಿಯರು ಆದರ್ಶವಾಗಿರಬೇಕು.ಅವರಿಗೆ ಮೌಲ್ಯಯುತ ಶಿಕ್ಷಣವನ್ನು ಕೊಡುವ ಕೆಲಸವನ್ನು ಹೆತ್ತವರು ಮಾಡಬೇಕು.ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಾಗ ಬೇಡದ ವಿಚಾರಗಳು ದೂರವಾಗುತ್ತದೆ. ಇಲ್ಲಿ ಕಲಿತುಕೊಂಡ ಸಂಸ್ಕಾರವನ್ನು ಮನೆಯಲ್ಲಿ ಅಳವಡಿಸಿದಾಗ ಸಂಸ್ಕಾರಯುತ ಕುಟುಂಬ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ವೆ.ಮೂ.ಪುರೋಹಿತ ನಾಗರಾಜ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಪ್ರಭಾ ಸುರೇಶ್ ವಹಿಸಿದ್ದರು. ಶ್ರೀಮತಿ ಮಾಲವಿಕಾ ರಾಮಚಂದ್ರ ಶುಭಾಶಂಸನೆ ಮಾಡಿದರು.ಶ್ರೀಮತಿ ಆಶಾ ದೇವರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಸಾನಿಧ್ಯ ಬಿ., ಮಾನ್ವಿ ಕೆ.ಎಸ್., ಮಿಥಾಲಿ, ಮನೀಶ್, ಮನ್ವಿತ್ ಎಂ.ವಿ., ವೇದ್ಯಾ, ಮನ್ವಿತ್ ಕೆ.ಸಿ., ಧ್ಯಾನ್ ಜಿ. ಅನಿಸಿಕೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಜಯಶ್ರೀ ವಸಂತ್ ಸ್ವಾಗತಿಸಿ, ಶ್ರೀಮತಿ ರೋಹಿಣಿ ಗಿರೀಶ್ ವಂದಿಸಿದರು. ಕು.ಯಶಸ್ವಿ ಮತ್ತು ಶ್ರೀಮತಿ ಶೀದೇವಿ ನಾಗರಾಜ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಉಚಿತವಾಗಿ ನಡೆದ ಶಿಬಿರದಲ್ಲಿ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ಶ್ಲೋಕ, ವೇದ ಮಂತ್ರ, ಯೋಗ, ಭಜನೆ ಉಪನ್ಯಾಸ, ಜಾದೂ, ಮಿಮಿಕ್ರಿ ಮೊದಲಾದವುಗಳನ್ನು ಕಲಿಸುವುದರೊಂದಿಗೆ ಸಂಸ್ಕಾರಯುತ ಜೀವನ ವಿಧಾನಕ್ಕೆ ಪೂರಕ ಮಾಹಿತಿಗಳನ್ನು ನೀಡಲಾಯಿತು.