ನರಸಿಂಹ ಸ್ವಾಮಿ ನಮೋಸ್ತುತೇ ಎಂಬ ಕನ್ನಡ ಭಕ್ತಿಗೀತೆ ಬಿಡುಗಡೆ

0

ಉಬರಡ್ಕ ಮಿತ್ತೂರು: ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನದಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ

ಉಬರಡ್ಕ ಮಿತ್ತೂರಿನ ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಮಾ. ೪ ರಂದು ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ನರಸಿಂಹ ಸ್ವಾಮಿ ನಮೋಸ್ತುತೇ ಎಂಬ ಕನ್ನಡ ಭಕ್ತಿಗೀತೆಯನ್ನು ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ಪಿ. ಯಸ್. ಗಂಗಾಧರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮುಕ್ತೇಸರರಾದ ಜತ್ತಪ್ಪ ಗೌಡ, ಮಾಜಿ ಮುಕ್ತೇಸರರಾದ ರತ್ನಾಕರ ಗೌಡ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ರಾಜೇಶ್ ಭಟ್ ನೆಕ್ಕಿಲ ಹಾಗೂ ಆಡಳಿತ ಸಮಿತಿಯ ಸದಸ್ಯರು ಮತ್ತು ಪದಾಧಿಕಾರಿಗಳು ಸೇರಿದಂತೆ ಯುವ ಗಾಯಕಿ ಆಂಕಿತಾ ಕಡ್ಲಾರು ಹಾಗೂ ಭಕ್ತಿಗೀತೆಯ ರಚನಾಕಾರಾದ ನಿರಂಜನ್ ಕಡ್ಲಾರು ಮತ್ತು ಗಾಯಕಿಯಾದ ಉಷಾ ಉಬರಡ್ಕ ಉಪಸ್ಥಿತರಿದ್ದರು.

ಈ ಭಕ್ತಿಗೀತೆಗೆ ನಿರಂಜನ್ ಕಡ್ಲಾರು ರವರ ಸಾಹಿತ್ಯವಿದ್ದರೆ ಉಷಾ ಉಬರಡ್ಕ ರವರ ಗಾಯನವಿದೆ. ಶರತ್ ಬಿಳಿನೆಲೆ ಯವರು ಸಂಗೀತ ನೀಡಿದ್ದರೆ, ಇಂದೂದರ್ ಅಳೆಯಂಗಡಿಯವರ ಸಂಕಲನವಿದೆ.