ವರದಿ : ಉಮೇಶ್ ಮಣಿಕ್ಕಾರ
ಜೆಸಿಐ ಬೆಳ್ಳಾರೆ ಘಟಕದ ವತಿಯಿಂದ ನಿಸ್ವಾರ್ಥ ಸೇವಕರನ್ನು ಗುರುತಿಸಿ ಗೌರವಿಸುವ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪೆಬ್ರವರಿ ತಿಂಗಳ ಗೌರವ ಸಮರ್ಪಣಾ ಕಾರ್ಯಕ್ರಮ ಬೆಳ್ಳಾರೆಯ ಜ್ಞಾನಗಂಗಾ ಸ್ಕೂಲ್ ನಲ್ಲಿ ನಡೆಯಿತು.
ಸಮಾರಂಭದಲ್ಲಿ ಜ್ಞಾನಗಂಗಾ ಸಂಸ್ಥೆಯ ಭದ್ರತಾ ಸಿಬ್ಬಂದಿ ಶೀನಪ್ಪ ಕೆ ಅವರನ್ನು ಸೈಲೆಂಟ್ ಸ್ಟಾರ್ ಗೌರವದೊಂದಿಗೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ಸಂಚಾಲಕ ಉಮೇಶ್ ಎಂ.ಪಿ. ಸನ್ಮಾನಿಸಿದರು. ಬೆಳ್ಳಾರೆ ಜೆಸಿಐ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಬೀಡು ಅಧ್ಯಕ್ಷತೆ ವಹಿಸಿದ್ದರು.
ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲೆ ದೇಚಮ್ಮ ಟಿ.ಎಂ., ಬೆಳ್ಳಾರೆ ಜೆಸಿಐ ಘಟಕದ ಪೂರ್ವಾಧ್ಯಕ್ಷ ಲೋಕೇಶ್ ತಂಟೆಪ್ಪಾಡಿ, ನಿಕಟಪೂರ್ವಾಧ್ಯಕ್ಷ ಜಗದೀಶ್ ರೈ ಪೆರುವಾಜೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಉಮೇಶ್ ಮಣಿಕ್ಕಾರ ವಂದಿಸಿದರು. ಪೂರ್ವಾಧ್ಯಕ್ಷ ಪ್ರಸಾದ್ ಸೇವಿತ, ಯಾಹಿಯಾ ಬೆಳ್ಳಾರೆ, ಭವ್ಯ ಕಲ್ಲೋಣಿ ಸಹಕರಿಸಿದರು.