ಬಡ ಯತೀಮ್ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಮತ್ತು ದಶ ಕಾರ್ಯಕ್ರಮಗಳು
ಪೈಂಬೆಚ್ಚಾಲು ಅಜ್ಮೀರ್ ಮೌಲಿದ್ ಸಮಿತಿ ವತಿಯಿಂದ ವಾರ್ಷಿಕ ಅಜ್ಮೀರ್ ಮೌಲಿದ್ ಇದರ ದಶಮಾನೋತ್ಸವ ಅಂಗವಾಗಿ ಜನವರಿ 2 ರಿಂದ ಜನವರಿ 12 ರವರೆಗೆ ಹತ್ತು ದಿನಗಳ ವಿಶಿಷ್ಟ ಕಾರ್ಯಕ್ರಮಗಳು ಮತ್ತು ಬಡ ಯತಿಂ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ಪೈಂಬೆಚ್ಚಾಲು ಬದ್ರಿಯಾ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.
ಅಲ್ ಹಾಜ್ ಮಹಮ್ಮದ್ ಅಲಿ ಮದನಿ ಕೊಝಿಕ್ಕೊಡು ರವರ ನೇತೃತ್ವದಲ್ಲಿ ಜಿಸ್ತಿಯ್ಯಾ ಕುತುಬಿಯತ್, ಫಾತಿಮಾ ಮಿಶ್ರಿಯ ನೆಲ್ಲಿಕ್ಕುನ್ನು ಹಾಗೂ ಫಾತಿಮಾ ಝಕೀಯ ಆಲಂಬಾಡಿ ಅವರ ನೇತೃತ್ವದಲ್ಲಿ ಮಹಿಳೆಯರಿಗೆ ಮಯ್ಯತ್ ಪರಿಪಾಲನೆ ಪ್ರಾಕ್ಟಿಕಲ್ ಕ್ಲಾಸ್ (ಮಹಿಳೆಯರಿಗೆ )
ಧಾರ್ಮಿಕ ಪ್ರಭಾಷಣ ಮರಣ ನಂತರ ಜೀವನ ಮತ ಹಾಗೂ ಶಾಸ್ತ್ರೀಯ ವೀಕ್ಷಣದಲ್ಲಿ LCD ಕ್ಲಿಪ್ಟಿಂಗ್ ಸಹಿತ ಡಾ.ವಿ ಬಿ ಎಂ ರಿಯಾಝ್ ಆಲುವ ಕೇರಳ ರವರು ತರಬೇತಿ ನೀಡಲಿದ್ದಾರೆ. ಅಬೂಬಕ್ಕರ್ ಮಿಸ್ಬಾಹಿ ಪಟ್ಟಾಂಬಿ ಉಸ್ತಾದ್ ರವರ ನೇತೃತ್ವದಲ್ಲಿ ಫಿಖ್ಹ್ ಕ್ಲಾಸ್
ಅಸ್ಸಯ್ಯದ್ ಸುಹೈಲ್ ಅಸ್ಸಕಾಫ್ ತಂಙಳ್ ರವರ ನೇತೃತ್ವದಲ್ಲಿ ತಾಝುಲಿ ರಾತಿಬ್ ಹಾಗೂ ದುಅ ಮಜ್ಜಿಸ್ ನಡೆಯಲಿದೆ. ಜನವರಿ 9ರಂದು
ಅಸ್ಸಯ್ಯದ್ ಉಮರುಲ್ ಜಿಫ್ರೀ ತಂಙಳ್ ರವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದ್ದು ಅಂದು ರಾತ್ರಿ ಖ್ಯಾತ ಖವಾಲಿ ತಂಡದವರಿಂದ ಇಶಲ್ ಮದೀನಾ ಹಾಗೂ ಖವಾಲಿ ಅಲಾಪನೆ ನಡೆಯಲಿದೆ.
ಅಸ್ಸಯ್ಯದ್ ಮಶ್ಹೂದ್ ತಂಙಳ್ ಕೂರತ್ ರವರ ನೇತೃತ್ವದಲ್ಲಿ ಜಲಾಲಿಯಾ ರಾತೀಬ್ & ಖುರ್ರತುಸ್ವಾದಾತ್ ತಂಙಳ್ ರವರ ಅನುಸ್ಕರಣೆ ಮತ್ತು ಧಾರ್ಮಿಕ ಪ್ರವಚನಗಾರ ನೌಫಲ್ ಸಖಾಫಿ ಕಳಸ ರವರಿಂದ ಪ್ರಭಾಷಣ ನಡೆಯಲಿದೆ.
ಅಬ್ದುಲ್ ಲತೀಫ್ ಕಾಂತಪುರಂ ಇವರ ನೇತೃತ್ವದಲ್ಲಿ ಮದನಿಯಂ ಮಜ್ಲೀಸ್ ನಡೆಯಲಿದೆ.
ಜನವರಿ 12ರಂದು ಅಜ್ಮೀರ್ ಮೌಲಿದ್ ಮಜಿಲೀಸ್ ಹಾಗೂ ಖತಮುಲ್ ಖುರ್ಹನ್ ನಡೆದು ಹಿರಿಯ ಪಂಡಿತ ಅಲ್ಹಾಜ್ ಓಲೆ ಮುಂಡಾವ್ ಉಸ್ತಾದ್ ರವರಿಂದ ಪ್ರಭಾಷಣ ನಡೆಯಲಿದೆ.
ಸಮಾರೋಪ ಸಮಾರಂಭ ಹಾಗೂ ಬಡ ಯತೀಂ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾಯಕ್ರಮ
ಝೖನುಲ್ ಉಲಮಾ ಮಾಣಿ ಉಸ್ತಾದ್ ರವರ ನೇತೃತ್ವದಲ್ಲಿ ನಡೆಯಲಿದೆ.
ಉದ್ಘಾಟನೆ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ಖತೀಬರು ಗಾಂಧಿನಗರ ನೆರವೇರಿಸಲಿದ್ದು
ಮುಖ್ಯಪ್ರಭಾಷಣವನ್ನು ಖ್ಯಾತ ವಾಗ್ಮಿ ಪಿ ಕೆ ಬಾದುಶ ಸಖಾಫಿ ಆಲಪುಝ ಮಾಡಲಿದ್ದಾರೆ.
ದುಆ ನೇತೃತ್ವವನ್ನು ಅಸ್ಸಯದ್ ಶಿಹಾಬುದ್ದೀನ್ ಅಲ್ ಅಹ್ದಲ್ ಮುತ್ತನ್ನೂರ್ ತಂಙಳ್ ನೆರವೇರಿಸಲಿದ್ದಾರೆ.
ಹಾಗೂ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಇನ್ನೂ ಹಲವಾರು ಸಯ್ಯದ್ ಉಲಮ ನೇತಾರರು ಉಮರ ನೇತಾರರು ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.