ಪೆರಾಜೆ ಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಸೆ.21 ರಂದು ನಾಪೋಕ್ಲುವಿನಲ್ಲಿ ನಡೆದ ಮಡಿಕೇರಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪೆರಾಜೆ ಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಾವೆಲಿನ್ ಥ್ರೋ ದಲ್ಲಿ ನಿಶಾ ಬಿ. ಎಲ್. ಪ್ರಥಮ, ಉದ್ದ ಜಿಗಿತ ಹಾಗೂ 200 ಮೀಟರ್ ಓಟದಲ್ಲಿ ಅಶ್ವಿನಿ ಕೆ.ಜಿ. ದ್ವಿತೀಯ, ಎತ್ತರ ಜಿಗಿತದಲ್ಲಿ ಪ್ರಜ್ವಲ್ ಪಿ.ಬಿ. ದ್ವಿತೀಯ, ಹ್ಯಾಮರ್ ಥ್ರೋ ನಲ್ಲಿ ತನುಷ್ ಕೆ.ವಿ. ಪ್ರಥಮ ಮತ್ತು ಸಚಿನ್ ಕೆ. ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಬೇಬಿ ಎ. ಇವರು ತರಬೇತಿ ನೀಡಿದ್ದರು.