ಪಂಜದ ನೆಲ್ಲಿಕಟ್ಟೆಯಲ್ಲಿ ಮೋರಿಗೆ ಡಿಕ್ಕಿ ಹೊಡೆದ ಬೊಲೆರೋ ವಾಹನ-ಇಬ್ಬರಿಗೆ ಗಾಯ

0

ಪಂಜದ ನೆಲ್ಲಿಕಟ್ಟೆ ಎಂಬಲ್ಲಿ ಮಹೀಂದ್ರ ಬೊಲೆರೋ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದ ಘಟನೆ ಡಿ.16 ರಂದು ಸಂಜೆ ವರದಿಯಾಗಿದೆ.
ಪಂಜದಿಂದ ಬಳ್ಪ ಕಡೆಗೆ ಹೋಗುತ್ತಿದ್ದ ಬೊಲೆರೋ ವಾಹನ ಮೋರಿಗೆ ಡಿಕ್ಕಿ ಹೊಡೆದಿದ್ದು ವಾಹನದ ಮುಂಭಾಗ ಜಖಂಗೊಂಡಿದೆ. ವಾಹನದಲ್ಲಿದ್ದ ಇಬ್ಬರು ಗಾಯ ಗೊಂಡಿದ್ದು ಅವರನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.