ಬೆಳ್ಳಾರೆಯ ಕೊಳಂಬಳ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಜೀಪೊಂದು ಪಲ್ಟಿಯಾದ ಘಟನೆ ಡಿ.16 ರಂದು ರಾತ್ರಿ ನಡೆದಿದೆ.










ಬೆಳ್ಳಾರೆ ಮೆಸ್ಕಾಂ ಶಾಖೆಯ ಜೆ.ಇ.ಪ್ರಸಾದ್ ಕತ್ಲಡ್ಕರವರು ಬೆಳ್ಳಾರೆ ಕಡೆಯಿಂದ ನೆಟ್ಟಾರು ಕಡೆಗೆ ಜೀಪಿನಲ್ಲಿ ಹೋಗುವಾಗ ನಿಯಂತ್ರಣ ತಪ್ಪಿ ಜೀಪು ರಸ್ತೆ ಬದಿಯ ಹೊಂಡಕ್ಕೆ ಬಿದ್ದು ಪಲ್ಟಿಯಾದ ಪರಿಣಾಮ ಅವರಿಗೆ ಗಾಯವಾಗಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.










