ಸಂವಿತ್ ಯೋಗ ಫೌಂಡೇಶನ್ ಬೆಂಗಳೂರು, ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆ ಇವುಗಳ ಜಂಟಿ ಆಶ್ರಯದಲ್ಲಿ ಶಿಕ್ಷಕರಿಗೆ ಕನಿಷ್ಠತಮ ಯೋಗ ತರಬೇತಿಯನ್ನು ಸೆ.23ರಂದು ನೀಡಲಾಯಿತು. ಹಾಗೂ ಯೋಗದ ಮಹತ್ವ ಹಾಗೂ ಪಡೆದ ತರಬೇತಿಯ ಪ್ರಯೋಜನವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಅಗತ್ಯತೆಯನ್ನು ತಿಳಿಸಲಾಯಿತು.
ಸಂವಿತ್ ಯೋಗ ಫೌಂಡೇಶನ್ ಇದರ ಯೋಗ ಶಿಕ್ಷಕರು ಹಾಗೂ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಯೋಗ ವಿಷಯ ಪ್ರಮುಖ್ ಚಂದ್ರಶೇಖರ್ ಪುತ್ತೂರು ಹಾಗೂ ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯ ಇದರ ಸಂಚಾಲಕರಾದ ಸಂತೋಷ್ ಮುಂಡೋಕಜೆ ಶಿಕ್ಷಕರಿಗೆ ಕನಿಷ್ಠತಮ ಯೋಗ ಹಾಗೂ ಪ್ರಾಣಾಯಾಮಗಳ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ನೀಡಿದರು. ವೇದಿಕೆಯಲ್ಲಿ ಜ್ಞಾನದೀಪ ಶಾಲೆಯ ನಿರ್ದೇಶಕರಾದ ಶ್ರೀಕೃಷ್ಣ ಗುಂಡಿ ಮಜಲು, ಶಿಕ್ಷಕರಕ್ಷಕ ಸಂಘದ ಕಾರ್ಯದರ್ಶಿಯವರಾದ ಶ್ರೀಮತಿ ಭಾರತಿ ಆರ್ನೋಜಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಗದಾಧರ ಬಾಳುಗೋಡು ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ದಿವ್ಯಕುಮಾರಿ ವಂದಿಸಿದರು. ಶಿಕ್ಷಕಿಯವರಾದ ಶ್ರೀಮತಿ ಗೌತಮಿ ಹಾಗೂ ಕುಮಾರಿ ಪೂಜಾ ಕಾರ್ಯಕ್ರಮ ನಿರೂಪಿಸಿದರು.