ಪಂಜ :ಅಕ್ರಮ ಜಾನುವಾರು ಸಾಗಾಟ – ಪೊಲೀಸ್ ವಶ

0

ಅಕ್ರಮವಾಗಿ ಜಾನುವಾರುಗಳ ಸಾಗಾಟ ಮಾಡುತ್ತಿದ್ದ ವಾಹನ ಪತ್ತೆಯಾಗಿದ್ದು
ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ
ಪಡೆದ ಘಟನೆ ಸೆ.24 ರಂದು ರಾತ್ರಿ
ವರದಿಯಾಗಿದೆ.


ಸೆ.24 ರಂದು ರಾತ್ರಿ ಪಂಜದ ಕುಳ್ಳಕೋಡಿ ಎಂಬಲ್ಲಿ 5 ಜಾನುವಾರುಗಳ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ
ರಸ್ತೆಯಲ್ಲಿ ಸಿಲುಕಿ ಮುಂದಕ್ಕೆ ಹೋಗದೆ ಬಾಕಿಯಾಗಿತ್ತು. ಬಳಿಕ ಪಿಕಪ್ ನಲ್ಲಿ ಇದ್ದವರು ಅಲ್ಲಿಂದ ಪರಾರಿಯಾಗಿದ್ದರು ಎನ್ನಲಾಗಿದೆ.
ವಿಷಯ ತಿಳಿದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಜಾನುವಾರುಗಳಿದ್ದ
ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.