ಸುಬ್ರಹ್ಮಣ್ಯ : 53ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

0

ಅದ್ದೂರಿ ಶೋಭಾಯಾತ್ರೆ, ವೈವಿದ್ಯಮಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಸುಬ್ರಹ್ಮಣ್ಯದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 53ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ವೈಭವಯುತವಾಗಿ ನಡೆದು ಸೆ.23 ರಂದು ಅದ್ದೂರಿಯ ಶೋಭಾಯಾತ್ರೆ ನಡೆದು ಗಣಪತಿ ಮೂರ್ತಿಯ ಜಲ ಸ್ತಂಭನ ನಡೆಸಲಾಯಿತು.

ಸೆ.19 ರಂದು ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಅಲ್ಲಿಂದ ಪ್ರತಿ ದಿನ ವಿವಿಧ ಧಾರ್ಮಿಕ, ವೈಧಿಕ ಕಾರ್ಯಕ್ರಮಗಳು ನಡೆದಿದ್ದು ಸೆ.23 ರಂದು ಶೋಭಾಯಾತ್ರೆ ಬಳಿಕ ಗಣಪತಿ ಮೂರ್ತಿಯ ವಿಸರ್ಜನೆ ನಡೆಯಿತು.


ಕುಕ್ಕೆ ಶ್ರೀ ರಥಬೀದಿಯ ಕುಕ್ಕೆಶ್ರೀ ಕಲಾವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಜರಗಿದ್ದವು. ಮೆರವಣಿಗೆಯಲ್ಲಿ ಭರತಮಾತೆ ಭಾವಚಿತ್ರ, ಛತ್ರಪತಿ ಶಿವಾಜಿ ಸ್ತಬ್ಧ ಚಿತ್ರ, ಬ್ಯಾಂಡ್ ಸೆಟ್, ಡಿ‌.ಜೆ ಸೌಂಡ್ ಸಿಸ್ಟಮ್, ಚೆಂಡೆ ಕಲಾವಿದರು, ತಾಲೀಮು ಪ್ತದರ್ಶನ, ವಿವಿಧ ಬಗೆಯ ಟ್ಯಾಬ್ಲೋಗಳು ಇದ್ದವು.