ಪಂಜದಲ್ಲಿ ಕೃಷಿ ಕ್ಲಿನಿಕ್ ಉದ್ಘಾಟನೆ

0


🔸 ಮಣ್ಣಿನ ಆರೋಗ್ಯ ಹಾಗೂ ಫಲವತ್ತತೆಯನ್ನು ರಕ್ಷಿಸಿ : ಕು.ಭಾಗೀರಥಿ ಮುರುಳ್ಯ

ಕರ್ನಾಟಕ ಸರಕಾರ ತೋಟಗಾರಿಕೆ ಇಲಾಖೆಯ ಸಹಯೋಗದ ಸಂಸ್ಥೆ ಪರಿವಾರ ಪಂಜ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ವತಿಯಿಂದ ಕೃಷಿ ಕ್ಲಿನಿಕ್ -ಮಣ್ಣು ಪರೀಕ್ಷಾ ಕೇಂದ್ರ,ಕೃಷಿ ಸಲಹಾ ಕೇಂದ್ರ ಮತ್ತು ಸಾವಯುವ, ರಾಸಾಯನಿಕ ಗೊಬ್ಬರ ಮಾರಾಟ ಕೇಂದ್ರವು ಪಂಜ ದೀನ್ ದಯಾಳ್ ಸಂಕೀರ್ಣದಲ್ಲಿ ಸೆ.26 ರಂದು ಉದ್ಘಾಟನೆ ಗೊಂಡಿತು.


ಶಾಸಕಿ ಕು. ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ಮಣ್ಣಿನ ಆರೋಗ್ಯ ಹಾಗೂ ಫಲವತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಇದು ಪೂರಕ ಹಾಗೂ ಎಲ್ಲಾ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.

ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನಿಂದ (ಐ.ಸಿ.ಎ.ಆರ್) ಅನುಮೋದಿತ ಆಧುನಿಕ ತಂತ್ರಜ್ಞಾನದ ಸ್ವಯಂಚಾಲಿತ, ಕ್ಷಿಪ್ರ ಹಾಗೂ ನಿಖರ ಫಲಿತಾಂಶ ನೀಡುವ ಮಣ್ಣು ಪರೀಕ್ಷಾ ಯಂತ್ರದ ಚಾಲನೆಯನ್ನು ಸುಳ್ಯ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶ್ರೀಮತಿ ಸುಹಾನ ಪಿ ಕೆ. ರವರು ಮಾಡಿದರು.

ಮಣ್ಣು ಪರೀಕ್ಷಾ ಫಲಿತಾಂಶದ ವರದಿಯನ್ನು ಪಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ ರವರು ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದಲ್ಲಿ ಕಂಪನಿಯ ನಿರ್ದೇಶಕ ಅನೂಪ್ ಬಿಳಿಮಲೆ ಸ್ವಾಗತಿಸಿದರು. ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀವನ್ ಶೆಟ್ಟಿಗದ್ದೆ ನಿರೂಪಿಸಿದರು .ನಿರ್ದೇಶಕ ಲೋಕೇಶ್ ಬರೆಮೇಲು ವಂದಿಸಿದರು. ರೈತ ಉತ್ಪಾದಕ ಕಂಪನಿಯ ನಿರ್ದೇಶಕರುಗಳು, ಪ್ರಗತಿಪರ ಕೃಷಿಕರು, ಪಾಲುದಾರ ಸದಸ್ಯರು ಉಪಸ್ಥಿತರಿದ್ದರು.