ಗುತ್ತಿಗಾರು: ಪೋಷಣ್ ಮಾಸಾಚರಣೆ

0


ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಂಖ ಶ್ರೀ ಸ್ತ್ರೀ ಶಕ್ತಿ ಗೊಂಚಲು, ರೋಟರಿ ಕ್ಲಬ್ ಸುಬ್ರಮಣ್ಯ, ಗ್ರಾಮ ಪಂಚಾಯತ್ ಗುತ್ತಿಗಾರು, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ , ಗುತ್ತಿಗಾರು ವಲಯದ ೯ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರ ರು ಇವರೆಲ್ಲರ ಪಾಲ್ಗೊಳ್ಳುವಿಕೆಯಲ್ಲಿ ಪೋಷಣ್ ಮಾಸಾಚರಣೆಯನ್ನು ನಡೆಸಲಾಯಿತು.


ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಅಧ್ಯಕ್ಷರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಮಿತ್ರ ಮೂಕಮಲೆ, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಯುತ ಧನಪತಿ, ಪಂಚಾಯತ್ ಸದಸ್ಯ ವೆಂಕಟ್ ವಳಲಂಬೆ ,ಅಂಗನವಾಡಿಗಳ ಮೇಲ್ವಿಚಾರಕಿ ಶ್ರೀಮತಿ ವಿಜಯ ಜೆ.ಡಿ., ಸ್ತ್ರೀ ಶಕ್ತಿ ಗೊಂಚಲಿನ ಅಧ್ಯಕ್ಷೆ ಸೇಲಿನ ಸಬಾಸ್ಟೀನ್, ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಅಧ್ಯಕ್ಷ ಪ್ರಶಾಂತ್ ಕೋಡಿಬೈಲು, ಕಾರ್ಯದರ್ಶಿ ಮೋಹನ್‌ದಾಸ್ ಎಣ್ಣೆಮಜಲು, ನಿಕಟ ಪೂರ್ವಾಧ್ಯಕ್ಷ ಮಾಯಿಲಪ್ಪ ಸಂಕೇಶ ,ಪೂರ್ವಾಧ್ಯಕ್ಷ ಗಿರಿಧರ ಸ್ಕಂದ ,ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ನಿವೇದಿತಾ , ದೇವಿ ಸಿಟಿ ಕಾಂಪ್ಲೆಕ್ಸ್ ಮಾಲಕ ದೇವಿ ಪ್ರಸಾದ್ ಚಿಕ್ಮುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಗುತ್ತಿಗಾರು ಅಂಗನವಾಡಿ ಕಾರ್ಯಕರ್ತೆ ಗುಲಾಬಿ ಪ್ರಾರ್ಥನೆ ಮಾಡಿದರು . ಅಮರ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಯಮಿತಾ ಪೂರ್ಣಚಂದ್ರ ಅತಿಥಿಗಳನ್ನು ಸ್ವಾಗತಿಸಿದರು . ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ವಿಜಯ ಜೆ.ಡಿ. ಪ್ರಾಸ್ತಾವಿಕ ಭಾಷಣ ಮಾಡಿದರು . ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನವರು ಪೌಷ್ಟಿಕಾಂಶದ ಕೊರತೆ ಇರುವ ಮಕ್ಕಳಿಗೆ ಪೌಷ್ಟಿಕ ಪೌಡರ್‌ನ್ನು ವಿತರಿಸಿದರು. ಪೌಷ್ಟಿಕ ಆಹಾರದ ಖಾದ್ಯಗಳ ತಯಾರಿಕೆಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಒಟ್ಟು ೨೭ ಖಾದ್ಯಗಳ ತಯಾರಿಸಿದ್ದರು ಇವರಿಗೆ ರೋಟರಿ ಕ್ಲಬ್ಬಿನ ನಿಕಟಪೂರ್ವ ಅಧ್ಯಕ್ಷರಾದ ಮಾಲಪ್ಪ ಸಂಕೇಶ್ ರವರು ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಿಸಿದರು. ಮೂರು ಜನ ಗರ್ಭಿಣಿಯರಿಗೆ ಸೀಮಂತ ಹಾಗೂ ಒಂದು ಮಗುವಿನ ಜನ್ಮದಿನಾಚರಣೆ ಮಾಡಲಾಯಿತು. ದೇವಿಪ್ರಸಾದ್ ಚಿಕ್ಮುಳಿ ಹಾಗೂ ನಡುಗಲು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಂತಿಯವರನ್ನು ಗೌರವಿಸಲಾಯಿತು . ಬಳ್ಳಕ ಅಂಗನವಾಡಿ ಕಾರ್ಯಕರ್ತೆ ಕು. ಲತಾ ಅಂಬೆಕಲ್ಲು ವಂದಿಸಿದರು. ಗ್ರಂಥ ಪಾಲಕಿ ಶ್ರೀಮತಿ ಅಭಿಲಾಷರವರು ಹಾಗೂ ಶ್ರೀಮತಿ ಯಮಿತಾಪೂರ್ಣಚಂದ್ರ ಕಾರ್ಯಕ್ರಮ ನಿರೂಪಿಸಿದರು.