ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಬ್ಲೂ ಡೇ ಆಚರಣೆ

0

ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಸೆ.27 ರಂದು ನೀಲಿ ಬಣ್ಣದ ಆಚರಣೆಯನ್ನು ಆಚರಿಸಲಾಯಿತು. ನೀಲಿ ಬಣ್ಣವು ನಂಬಿಕೆ , ನಿಷ್ಠೆ , ಬುದ್ದಿವಂತಿಕೆ, ವಿಶ್ವಾಸ, ಸತ್ಯ ಮತ್ತು ಸ್ವರ್ಗವನ್ನು ಸೂಚಿಸುತ್ತದೆ. ಅದೇ ರೀತಿ ನೀಲಿ ಬಣ್ಣವನ್ನು ಶಾಂತಿಯುತ ಎಂದು ಪರಿಗಣಿಸಲಾಗಿದೆ. ನೀಲಿ ಬಣ್ಣದ ಆಚರಣೆಯ ಜೊತೆಗೆ ನೀಲಿ ಬಣ್ಣದ ಆಕಾಶ , ನೀಲಿ ಬಣ್ಣದ ಮೋಡ ,ನೀಲಿ ಬಣ್ಣದ ಗ್ಲೋಬ್ ಬಗ್ಗೆ ಸಂಸ್ಥೆಯ ಸಂಚಾಲಕಿ ಶ್ರೀಮತಿ ಗೀತಾಂಜಲಿ ಯವರು ವಿವರಿಸಿದರು.

ಪುಟಾಣಿ ವಿದ್ಯಾರ್ಥಿಗಳು ನೀಲಿ ಬಣ್ಣದ ಬಟ್ಟೆ ಧರಿಸಿ ರಾಂಪ್ ವಾಕ್ ಮಾಡಿದರು. ಸಂಸ್ಥೆಯ ಶಿಕ್ಷಕರು ಮತ್ತು ಮಕ್ಕಳು ನೀಲಿ ಬಣ್ಣದ ಬಟ್ಟೆ ಧರಿಸಿ ಸಂಭ್ರಮಿಸಿದರು.