ಜಟ್ಟಿಪಳ್ಳ ತಿರುವಿನಲ್ಲಿ ಸ್ಕೂಟಿಗೆ ಕಾರು ಡಿಕ್ಕಿ- ಅದೃಷ್ಟವಶಾತ್ ಪಾರಾದ ಸ್ಕೂಟಿ ಸವಾರ

0

ಶ್ರೀ ರಾಮಪೇಟೆಯ ಮುಖ್ಯರಸ್ತೆಗೆ ಜಟ್ಟಿಪಳ್ಳ ರಸ್ತೆಯ ಕಡೆಯಿಂದ ಬಂದ ಸ್ಕೂಟರಿಗೆ ಮುಖ್ಯ ರಸ್ತೆಯ ಮೇಲಿನಿಂದ ಬರುತ್ತಿದ್ದ ಆಲ್ಟೋ ಕಾರು ಡಿಕ್ಕಿ ಹೊಡೆದ ಘಟನೆ ಜ.16 ರಂದು ಸಂಭವಿಸಿದೆ.

ಕೆ.ಎಲ್.ರಿಜಿಸ್ಟ್ರೇಷನ್ ಹೊಂದಿದ ಆಲ್ಟೋ ಕಾರು ಮಡಿಕೇರಿ ಕಡೆಯಿಂದ ಬರುತ್ತಿದ್ದಾಗ ಸ್ಕೂಟಿ ಸವಾರ ಏಕಾಏಕಿ ಮುಖ್ಯರಸ್ತೆಗೆ ಎಂಟ್ರಿ ಕೊಟ್ಟಿದ್ದರಿಂದ ಅಪಘಾತ ಸಂಭವಿಸಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಸವಾರ ಮತ್ತು ಸ್ಕೂಟಿ ರಸ್ತೆ ಬದಿಗೆ ಚೆಂಡಿನಂತೆ ಎಸೆಯಲ್ಪಟ್ಟಿದೆ. ಅಪಘಾತ ನಡೆಯುವ ದೃಶ್ಯವನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಒಂದು ಕ್ಷಣಆಘಾತಕ್ಕೊಳಗಾಗಿದ್ದರು. ಘಟನೆ ನಡೆದ ಕ್ಷಣಾರ್ಧದಲ್ಲಿ ಧಾವಿಸಿ ಬಂದ ಜನರು
ಸವಾರನನ್ನು ಉಪಚರಿಸಿದರು. ಸ್ಕೂಟಿ ಸವಾರ ಯಾವುದೇ ಗಾಯಗಳಾಗದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.