ಕಲ್ಕುಡ ದೈವಸ್ಥಾನದಲ್ಲಿ ಆಮಂತ್ರಣ ಪತ್ರ ಬಿಡುಗಡೆ
ಅಯೋಧ್ಯಾ ಶ್ರೀರಾಮ ಪ್ರತಿಷ್ಠಾ ವಾರ್ಷಿಕೋತ್ಸವ ಸಮಿತಿ ಸುಳ್ಯ, ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃ ಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡ ಇದರ ಜಂಟಿ ಆಶ್ರಯದಲ್ಲಿ ಅಯೋಧ್ಯಾ ಪ್ರಭು ಶ್ರೀ ರಾಮಲಲ್ಲಾ ಪ್ರತಿಷ್ಠಾ ದಿನದ ಅಂಗವಾಗಿ
ಶ್ರೀ ರಾಮೋತ್ಸವ ಹಾಗೂ ಪ್ರಭು ಶ್ರೀರಾಮಚಂದ್ರ ಕಲ್ಪೋಕ್ತ ಪೂಜಾ ಕಾರ್ಯಕ್ರಮವು ಜ.22 ರಂದು ಸಂಜೆ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಜರುಗಲಿರುವುದು.
ಸಂಜೆ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ ಭಟ್ ರವರ ನೇತೃತ್ವದಲ್ಲಿ ಶ್ರೀ ರಾಮ ಕಲ್ಪೋಕ್ತ ಪೂಜೆಯು ನಡೆಯಲಿದೆ.
ಸಂಜೆ ಗಂಟೆ 5.00 ಕ್ಕೆ ಸುಳ್ಯ ಶ್ರೀ ರಾಮ ಮಂದಿರದಲ್ಲಿ ಸೇರಿ ಅರ್ಚಕರಿಂದ ಪ್ರಾರ್ಥನೆ ಯಾಗಿ ರಾಮ ಜ್ಯೋತಿ ಬೆಳಗಿಸಿ ಹಿರಿಯ ಉದ್ಯಮಿ ಕೃಷ್ಣ ಕಾಮತ್ ರವರು ರಾಮೋತ್ಸವದ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ತಾಲೂಕಿನ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಕುಣಿತ ಭಜನೆಯೊಂದಿಗೆ ಸಮಸ್ತ ಹಿಂದೂ ಬಾಂಧವರು ಮೆರವಣಿಗೆಯಲ್ಲಿ ಚೆನ್ನಕೇಶವ ದೇವಸ್ಥಾನದ ಮುಂಭಾಗದ ತನಕ ಸಾಗಿ ಬರಲಿದ್ದಾರೆ.
ಬಳಿಕ ಧಾರ್ಮಿಕ ಸಭೆಯು ಶ್ರೀ ರಾಮ ಪ್ರತಿಷ್ಠಾ ವಾರ್ಷಿಕೋತ್ಸ ಸಮಿತಿ ಅಧ್ಯಕ್ಷ ನಾರಾಯಣ ಜಿ.ಎನ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಉದ್ಘಾಟಿಸಲಿರುವರು.
ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಯವರು ಆಶೀರ್ವಚನ ನೀಡಲಿರುವರು. ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಉಪನ್ಯಾಸ ನೀಡಲಿರುವರು. ರಾತ್ರಿ ಆಗಮಿಸಿದ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನ ಸಂತರ್ಪಣೆಯಾಗಲಿರುವುದು.
ಕಲ್ಕುಡ ದೈವಸ್ಥಾನದಲ್ಲಿ ಆಮಂತ್ರಣ ಬಿಡುಗಡೆ:
ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ ಶ್ರೀ ರಾಮೋತ್ಸವದ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಲಾಯಿತು. ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ನಾವೂರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಜಿ.ಎನ್,ವಿ.ಹೆಚ್.ಪಿ.ಅಧ್ಯಕ್ಷ ಸೋಮಶೇಖರ ಪೈಕ, ಉಪಾಧ್ಯಕ್ಷ ಸೀತಾನಂದ ಬೇರ್ಪಡ್ಕ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಬಳ್ಳಾರಿ, ಕಾರ್ಯದರ್ಶಿ ನವೀನ್ ಎಲಿಮಲೆ, ಕೋಶಾಧಿಕಾರಿ ಮೋಹನಪ್ಪ ಜಯನಗರ,
ಸಂಚಾಲಕ ಶಿವಾನಂದ ಪಾಟೀಲ್, ವರ್ಷಿತ್ ಚೊಕ್ಕಾಡಿ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.