ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಪಂಜಿಗಾರು ಶಾಖೆ ಅಯ್ಯನಕಟ್ಟೆಯಲ್ಲಿರುವ ಸಂಘದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಜ. 16ರಂದು ಶುಭಾರಂಭಗೊಂಡಿತು.
ಸಂದೇಶ್ ಭಟ್ ಕಾಯಾರ ಗಣಹವನ ನೆರವೇರಿಸಿದರು.
ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು, ಉಪಾಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು, ನಿರ್ದೇಶಕರುಗಳಾದ ಎನ್. ವಿಶ್ವನಾಥ ರೈ ಕಳಂಜ, ಬಿ. ಸುಭಾಶ್ಚಂದ್ರ ರೈ ತೋಟ, ಮೇದಪ್ಪ ಗೌಡ ತಂಟೆಪ್ಪಾಡಿ,ಅಜಿತ್ ರಾವ್ ಕಿಲಂಗೋಡಿ, ಭಾರತೀಶಂಕರ ಆದಳ, ಸುಬ್ರಹ್ಮಣ್ಯ ಕೆ.ಎಲ್. ಕಾವಿನಮೂಲೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ತಡಗಜೆ, ಶಾಖಾ ಸಿಬ್ಬಂದಿ ಭಾಸ್ಕರ ಮುಂಡುಗಾರು, ಸದಸ್ಯರಾದ ಸುಭಾಶ್ಚಂದ್ರ ಅಯ್ಯನಕಟ್ಟೆ, ಕಳಂಜ ಬಳಕೆದಾರರ ವೇದಿಕೆಯ ಸಂಚಾಲಕರಾದ ಶಿವಪ್ರಸಾದ್ ಕೊಲ್ಲರ್ನೂಜಿ, ಸಂಘದ ನಿವೃತ್ತ ಸಿಬ್ಬಂದಿ ಜಯಂತ ಕಾಯಾರ, ಪುರೋಹಿತರಾದ ಶ್ರೀಕುಮಾರ ಕಾಯಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.