ಎಣ್ಮೂರು ಶಾಲಾ ವಾರ್ಷಿಕೋತ್ಸವ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಮೂರು, ಹಿರಿಯ ವಿದ್ಯಾರ್ಥಿ ಸಂಘ, ಹಾಗೂ ಊರ ವಿದ್ಯಾಭಿಮಾನಿಗಳ ಸಹಬಾಗಿತ್ವದಲ್ಲಿ ಜ. ೧೬ರಂದು ಎಣ್ಮೂರು ಶಾಲಾ ವಾರ್ಷಿಕೋತ್ಸವ ನಡೆಯಿತು.


ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಶ ಅಬ್ದುಲ್ ಶರೀಫ್ ಧ್ವಜಾರೋಹಣಗೈದು, ಸಭಾಧ್ಯಕ್ಷತೆ ವಹಿಸಿದ್ದರು.
ಪ್ರಗತಿಪರ ಕೃಷಿಕ, ಶಾಲಾ ಕೊಡುಗೈ ದಾನಿ, ಹಿರಿಯರಾದ ದಯಾನಂದ ಕೋಟೆ ದೀಪ ಪ್ರಜ್ವಲನೆ ಮಾಡಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಈ ಶಾಲೆಯಲ್ಲಿ ವಿದ್ಯೆ ಪಡೆದು ಬಹು ಎತ್ತರದ ಅಲಂಕರಿಸಿದರೂ ಕಲಿತ ಶಾಲೆಯನ್ನು ಮರೆಯದೆ ಶಾಲಾ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಬೇಕೆಂದರು.

ನಿವೃತ್ತಿ ಹೊಂದಿದ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ. ಹೇಮಳ ರವರು ಮಾತನಾಡಿ, ಊರಿನ ಶಾಲೆ ಬೆಳೆಯಬೇಕಾದರೆ ಶಾಲಾ ಎಸ್ ಡಿ ಎಂ ಸಿ ಸಮಿತಿ, ಶಾಲಾ ಶಿಕ್ಷಕರ ತಂಡ, ಹಿರಿಯ ವಿದ್ಯಾರ್ಥಿ ಸಂಘ, ಕೊಡುಗೈ ದಾನಿಗಳು ನಾಲ್ಕು ಚಕ್ರಗಳು ಇದ್ದಂತೆ ಎಂದು ಹೇಳಿದರು.


ವೇದಿಕೆಯಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಫೂರ್, ಎಡಮಂಗಲ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಸವಿತಾ ಕಲ್ಲೇರಿ, ಶ್ರೀಮತಿ ರೇವತಿ ರಘು, ಕಲ್ಮಡ್ಕ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಆಕ್ರಿಕಟ್ಟೆ, ಪಂಜ ಕ್ಲಸ್ಟರ್ ಶಿಕ್ಷಣ ಕಾರ್ಯದರ್ಶಿ ಶ್ರೀಮತಿ ಸಂದ್ಯಾ ಕುಮಾರಿ ಎಣ್ಮೂರು, ಸಿ ಆರ್ ಪಿ ಜಯಂತ ಕೆ, ನಿವೃತ ಶಿಕ್ಷಕ ಮೋನಪ್ಪ ಗೌಡ ಹೇಮಳ, ನಿವೃತ್ತ ಮುಖ್ಯ ಶಿಕ್ಷಕ ತೇಜಪ್ಪ ಗೌಡ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ವನಿತಾ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ರೈ ಕುಳೈತ್ತೋಡಿ, ಉದ್ಯಮಿ ಜಯರಾಮ ರೈ, ಎಸ್ ಜಿ ಎಪ್ ಅಧ್ಯಕ್ಷ ಬಾಲಕೃಷ್ಣ ರೈ ಕೆ, ಬೆಳ್ಳಾರೆ ಆಸ್ಮಿ ವಾಯುಮಾಲಿನ್ಯ ಕೇಂದ್ರದ ಮಾಲಕ ಸುಜಿತ್ ರೈ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶಾಲಾ ಮಕ್ಕಳಿಂದ ಪ್ರಾರ್ಥನೆ ಬಳಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಭುವನೇಶ್ವರಿಯವರಿಂದ ಪ್ರಸ್ತಾವನೆ ಮತ್ತು ಸ್ವಾಗತ ಬಾಷಣ ನಡೆಯಿತು.
ಸಹಶಿಕ್ಷಕಿ ಶ್ರೀಮತಿ ಸುರೇಖಾ ಕಾರ್ಯಕ್ರಮ ನಿರೂಪಿಸಿದರು, ಸಹ ಶಿಕ್ಷಕಿ ಶಾಂತಮ್ಮ ವಂದಿಸಿದರು. (ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ)