ಗುಂಡ್ಲ : ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ – 2 ಕ್ವಿಂಟಾಲ್ ರಬ್ಬರ್ ಬೆಂಕಿಗಾಹುತಿ

0

ಅರಂತೋಡು ಗ್ರಾಮದ ಗುಂಡ್ಲ ಮನೋಹರ ಎಂಬವರ ಮನೆಯ ಸ್ಮೋಕ್ ಹೌಸ್ ಬೆಂಕಿಗಾಹುತಿಯಾಗಿ, 2 ಕ್ವಿಂಟಾಲ್ ರಬ್ಬರ್ ಸಹಿತ ಇನ್ನಿತರ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಜ.16ರಂದು ಮುಂಜಾನೆ ನಡೆದಿದೆ.

ಸ್ಮೋಕ್ ಹೌಸ್ ಗೆ ಹಾಕಿದ್ದ ಬೆಂಕಿ ರಬ್ಬರ್ ಗೆ ಹತ್ತಿಕೊಂಡು‌ ಮನೆಯನ್ನೇ ಆವರಿಸಿತು. ಪರಿಣಾಮ ಸ್ಮೋಕ್ ಹೌಸ್, ಅದರಲ್ಲಿದ್ದ ಎರಡು ಕ್ವಿಂಟಾಲ್ ರಬ್ಬರ್, ಜನರೇಟರ್ ಸಹಿತ ಇನ್ನಿತರ ವಸ್ತುಗಳು ಸಂಪೂರ್ಣ ಹೊತ್ತಿ ಉರಿದಿದೆ ಎಂದು ತಿಳಿದುಬಂದಿದೆ.