ಫೆ.9 : ಸುಳ್ಯದಲ್ಲಿ ಉಪಾಸನಾ ಫೌಂಡೇಶನ್ ಮುಖ್ಯಸ್ಥ ಸದ್ಗುರು ಶ್ರೀರಾಮರವರ ನೇತೃತ್ವದಲ್ಲಿ ಮನೋಶಕ್ತಿ ಕಾರ್ಯಾಗಾರ

0

ಉಪಾಸನಾ ಫೌಂಡೇಶನ್ ಮುಖ್ಯಸ್ಥ ಸದ್ಗುರು ಶ್ರೀರಾಮರವರ ನೇತೃತ್ವದಲ್ಲಿ ಮನೋಶಕ್ತಿ ಕಾರ್ಯಾಗಾರ ಫೆ. 9 ರಂದು ಸುಳ್ಯದ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.

ದ.ಕ.ಜಿಲ್ಲೆಯ ಸ್ವಯಂಸೇವಕರು ಸೇರಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಸುಪ್ತ ಮನೋಶಕ್ತಿಯನ್ನು ಜಾಗೃತಗೊಳಿಸಿ ಬಯಸಿದ್ದನ್ನು ಹೇಗೆ ಪಡೆಯಬಹುದು ಹಾಗೂ ಗುರಿಯನ್ನು ಹೇಗೆ ತಲುಪಬಹುದು ಎಂಬುದನ್ನು ಅರಿತುಕೊಂಡು ಸಂಪೂರ್ಣ ಅಭಿವೃದ್ಧಿಯಾಗುವಂತೆ ಮಾಡುವ ಕಾರ್ಯಗಾರ ಇದಾಗಿದ್ದು, 14 ವರ್ಷ ಮೇಲ್ಪಟ್ಟ ಎಲ್ಲರೂ ಇದರಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕಾರ್ಯಕ್ರಮದ ಆಯೋಜಕರಲ್ಲಿ ಓರ್ವರಾದ ಎನ್.ಪಿ.ಧರ್ಮತೇಜರವರನ್ನು ಸಂಪರ್ಕಿಸಬಹುದು. ಮೊ: 7019009062