ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆ ಶುಭಾರಂಭ

0

ಸರಕಾರಿ ಮತ್ತು ಖಾಸಗಿ ಕ್ಷೇತ್ರದ ಉದ್ಯೋಗಾಕಾಂಕ್ಷಿಗಳಿಗೆ ಕೋಚಿಂಗ್ ಮತ್ತು ಅಗತ್ಯ ತರಬೇತಿ ನೀಡುವ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯ ಉದ್ಘಾಟನೆ ಇಂದು ಸುಳ್ಯದ ರಥಬೀದಿಯಲ್ಲಿರುವ ಟಿ.ಎ.ಪಿ.ಸಿ.ಎಂ.ಎಸ್. ಕಟ್ಟಡದಲ್ಲಿ ನೆರವೇರಿತು.
ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಹಾಗೂ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ನಿತ್ಯಾನಂದ ಮುಂಡೋಡಿ ದೀಪ ಬೆಳಗಿಸಿ ಕಚೇರಿಯನ್ನು ಉದ್ಘಾಟಿಸಿದರು.
ಅಣ್ಣಾ ವಿನಯಚಂದ್ರ, ಪಿ.ಸಿ.ಜಯರಾಮ್, ಜಯಪ್ರಕಾಶ್ ರೈ, ಪ್ರೊ.ಬಾಲಚಂದ್ರ ಗೌಡ, ಪಿ.ಎಸ್.ಗಂಗಾಧರ್, ಎ.ಕೆ.ಜಯರಾಮ ರೈ, ಜಯರಾಮ ದೇರಪ್ಪಜ್ಜನಮನೆ, ಅರವಿಂದ ಚೊಕ್ಕಾಡಿ, ಡಾ.ಪೂವಪ್ಪ ಕಣಿಯೂರು, ಹೇಮನಾಥ ಶೆಟ್ಟಿ, ವಿನಯ ಕಂದಡ್ಕ, ಪಿ.ಬಿ.ಸುಧಾಕರ ರೈ ಮೊದಲಾದ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಅಕಾಡೆಮಿಯ ಅಧ್ಯಕ್ಷ ಭಾಗ್ಯೇಶ್ ರೈ ಯವರು ಸ್ವಾಗತಿಸಿದರು