ಸುಳ್ಯ : ಅಧಿವಕ್ತಾ ಪರಿಷತ್‌ನಿಂದ ಕಾನೂನು ಕಾರ್ಯಾಗಾರ

0

ಅಖಿಲ ಭಾರತೀಯ ಅಧಿವಕ್ತಾ ಪರಿಷತ್ತಿನ ವತಿಯಿಂದ ಸೆ.28 ರಂದು ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ಪರಿಣಾಮಕಾರಿ ಪಾಟಿ ಸವಾಲು ವಿಷಯದ ಕುರಿತು ಕಾರ್ಯಗಾರ ನಡೆಯಿತು.

ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ ಕಾರ್ಯಾಗಾರವನ್ನು ಉದ್ಘಾಟಿಸಿದರು.


ಅಧಿವಕ್ತಾ ಪರಿಷತ್ತಿನ ಅಧ್ಯಕ್ಷ ಹರೀಶ್ ಬೂಡುಪನ್ನೆ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ನ್ಯಾಯವಾದಿ ಸಿಬಿಐ ವಿಶೇಷ ಅಭಿಯೋಜಕ ಮಿತ್ತಳಿಕೆ ಗಂಗಾಧರ ಶೆಟ್ಟಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಅಧಿವಕ್ತಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರು ಹಾಗೂ ಸುಳ್ಯ ವಕೀಲರ ಸಂಘದ ಕೋಶಾಧಿಕಾರಿ ಜಗದೀಶ್ ಡಿ ಪಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಧಿವಕ್ತಾ ಪರಿಷತ್ತಿನ ಸುಳ್ಯ ಘಟಕದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸಂದೀಪ್ ಮದುವೆಗದ್ದೆ ಸ್ವಾಗತಿಸಿ, ನ್ಯಾಯವಾದಿ ರಂಜಿತ್ ಕುಕ್ಕೇಟಿ ವಂದಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ, ನ್ಯಾಯವಾದಿ ದೀಪಕ್ ಕುತ್ತಮೊಟ್ಟೆ ಅತಿಥಿಗಳನ್ನು ಪರಿಚಯಿಸಿದರು. ನ್ಯಾಯವಾದಿ ಕುಮಾರಿ ಪಲ್ಲವಿ ಪ್ರಾರ್ಥಿಸಿ, ನ್ಯಾಯವಾದಿ ಶ್ರೀಮತಿ ಸವಿತಾ ಮತ್ತು ಸಂದೀಪ್ ವಳಲಂಬೆ ಕಾರ್ಯಕ್ರಮ ನಿರೂಪಿಸಿದರು.