ಗೂನಡ್ಕ: ರಸ್ತೆ ಬದಿ ನಿಲ್ಲಿಸಿದ್ದ ಆಪೆ ರಿಕ್ಷಾಕ್ಕೆ ಕಾರು ಢಿಕ್ಕಿ: ಜಖಂ

0

ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಿ ನಿಲ್ಲಿಸಿದ್ದ ಆಪೆ ರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದು ಅದೃಷ್ಟವಶಾತ್ ಪ್ರಯಾಣಿಕರ ಪಾರಾದ ಘಟನೆ ಸಂಪಾಜೆ ಗ್ರಾಮದ
ಗೂನಡ್ಕದಲ್ಲಿ ಸೆ.29ರಂದು ಸಂಭವಿಸಿದೆ.

ಗೂನಡ್ಕದ ಸ್ಥಳೀಯ ಹೋಟೆಲೊಂದರ ಮುಂಭಾಗದಲ್ಲಿ ಪಾರ್ಕಿಂಗ್ ಮಾಡಿದ ಗೂನಡ್ಕದ ಅಮಿರ್ ಎಂಬವರ ಆಪೆ ರಿಕ್ಷಾಕ್ಕೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಆಪೆ ರಿಕ್ಷಾದ ಮುಂಭಾಗಕ್ಕೆ ಹಾನಿಯಾಗಿದ್ದು, ಜಖಂಗೊಂಡಿರುವುದಾಗಿ ತಿಳಿದು ಬಂದಿದೆ.