ಅ.2 ರಂದು‌ ನ.ಪಂ. ವತಿಯಿಂದ ಸ್ವಚ್ಚತಾ ಅಭಿಯಾನ : ಆಮಂತ್ರಣದಲ್ಲಿ ಮಾಜಿ ಅಧ್ಯಕ್ಷರ ಹೆಸರು ಮುದ್ರಿಸುವಾಗ ತಾರತಮ್ಯ : ಎಂ.ವಿ.ಜಿ. ಆಕ್ಷೇಪ

0

ಮೇಲಧಿಕಾರಿಗಳ ಸೂಚನೆಯಂತೆ ಆಮಂತ್ರಣ ಮರು ಮುದ್ರಿಸಿದ ನ.ಪಂ

ಅ.2 ರಂದು ಸುಳ್ಯದಲ್ಲಿ ‌ನ.ಪಂ. ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿರುವ ಸ್ವಚ್ಚತಾ ಅಭಿಯಾನದ ಆಮಂತ್ರಣ ಪತ್ರದಲ್ಲಿ ಮಾಜಿ ಅಧ್ಯಕ್ಷರ ಹೆಸರು‌ ಮುದ್ರಿಸುವಾಗ ತಾರತಮ್ಯ ಮಾಡಲಾಗಿದೆ ಎಂದು ಅಸಮಾಧಾನ ಗೊಂಡ ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡರು ಮೇಲಧಿಕಾರಿಗಳಿಗೆ ದೂರಿಕೊಂಡ ಹಾಗೂ ಅಧಿಕಾರಿಗಳ ಸೂಚನೆ ಬೆನ್ನಲ್ಲೆ ನ.ಪಂ. ಅಧಿಕಾರಿಗಳು ಆಮಂತ್ರಣ ಮರು ಮುದ್ರಣಗೊಳಿಸಿರುವ ಘಟನೆ ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಂ.ವೆಂಕಪ್ಪ ಗೌಡರು ಅಕ್ಟೊಬರ್ ೨ ರ ಸುಳ್ಯ ನಗರ ಪಂಚಾಯತ್ ಸಭಾ ಕಾರ್ಯಕ್ರಮದಲ್ಲಿ ಅಥಿತಿಗಳ ಲಿಸ್ಟ್ ನಲ್ಲಿ ಒಬ್ಬ ಮಾಜಿ ಆಧ್ಯಕ್ಸ ಹಾಲಿ ಸದಸ್ಯ ವಿನಯಕುಮಾರ ಕಂದಡ್ಕರ ಹೆಸರನ್ನ ಪಂಚಾಯತ್ ಅಧಿಕಾರಿಗಳು ಹಾಗು ಆಡಳಿತಾಧಿಕಾರಿಗಳು ಅಚ್ಚು ಹಾಕಿಸಿದ್ದಾರೆ. ನಾನು ಕೂಡಾ ಮಾಜಿ ಅಧ್ಯಕ್ಷನಾಗಿದ್ದೇನೆ. ಇದನ್ನ ಕೇಳಿದಾಗ ಮುಖ್ಯಾಧಿಕಾರಿಗಳು ಅವರನ್ನು ನಿಕಟಪೂರ್ವ ಅಧ್ಯಕ್ಷರ ನೆಲೆಯಲ್ಲಿ ಅಥಿತಿ ಮಾಡಿದ್ದೇವೆ ಎಂದು ಹೇಳುತ್ತಾರೆ. ಈ ರೀತಿ ಯಾವ ಸರಕಾರಿ ಸಂಸ್ಥೆಯಲ್ಲಿ ಇದೆ ? ಇದು ಸರಕಾರಿ ಸಂಸ್ಥೆಯಾದ ಕಾರಣ ಯಾವುದೆ ಕಾರ್ಯಕ್ರಮ ಮಾಡುವುದಿದ್ದರೂ ಪ್ರೋಟೋಕಾಲ್ ಅನ್ನೋದಿದೆ .ಈ ಪ್ರೋಟೋಕಾಲ್ ನಲ್ಲಿ ಈ ರೀತಿಯ ಅವಕಾಶ ಇದೆಯಾ ? ಇದಕ್ಕೆ ಸಂಬಂದಿಸಿದ ಅಧಿಕಾರಿಗಳಿಂದ ಸ್ಪಷ್ಟಿಕರಣ ಬಯಸುತ್ತೇನೆ. ಇಲ್ಲಿ ಮಾಜಿ ಅಧ್ಯಕ್ಷರನ್ನು ಒಂದು ಮುಲಾಜಿಯಿಂದ ಹಾಕಿದ್ದೇವೆ ಎಂದಾದರೆ ಅಡ್ಡಿಯಿಲ್ಲ . ಅಂದ್ರೆ ಹಾಗೆ ನಿಕಟ ಪೂರ್ವ ಅಧ್ಯಕ್ಷರು ಅಂತ ಹಾಕೋದಕ್ಕೆ ಆಸ್ಪದ ಇದೆಯಾ ? ಮಾಜಿ ಅಧ್ಯಕ್ಷ ಅಂತಾದರೆ ಇನ್ನೂ ಕೆಲವರು ಇದ್ದಾರೆ .ಇಲ್ಲ ಮಾಜಿ ಹಾಗು ಹಾಲಿ ಸದಸ್ಯರು ಅಂದರೆ ಆ ಅವಕಾಶ ನನಗೂ ಇದೆ .ಹೀಗಿರುವಾಗ ಈ ರೀತಿಯ ರಾಜಕಿಯ ಮಾಡೊದು ಯಾರು ? ಇದನ್ನ ನಾವು ಪ್ರತಿಭಟಿಸಬೇಕಾಗಿದೆ. ನಾನು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ಈ ಕುರಿತು ನ.ಪಂ. ಮುಖ್ಯಾಧಿಕಾರಿ ಸುಧಾಕರ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ ಸೆ.29 ರಂದು ನ.ಪಂ. ನಲ್ಲಿ ಸಭೆ ಮಾಡಿದ್ದೆವು. ಅಲ್ಲಿ ಬಂದ ಅಭಿಪ್ರಾಯ ಮತ್ತು ಸಂಘ ಸಂಸ್ಥೆಗಳನ್ನು ಸೇರಿಕೊಂಡು ಸ್ವಚ್ಚತಾ ಅಭಿಯಾನ ಮಾಡಲು ಆಮಂತ್ರಣ ಮಾಡಿದ್ದೆವು. ಇಂದು ವೆಂಕಪ್ಪ ಗೌಡರ ಹೆಸರು ಸೇರಿಸಬೇಕೆಂಬ ಸಲಹೆ ಬಂದುದರಿಂದ ಅವರನ್ನು ಸೇರಿಸಿದ್ದೇವೆ. ಎಲ್ಲರನ್ನು ಒಟ್ಟಾಗಿ ಸೇರಿಸಿಕೊಂಡು ಸ್ವಚ್ಚತಾ ಅಭಿಯಾನ ನಡೆಸಲಿದ್ದೇವೆ ಎಂದು ಹೇಳಿದರು.