ಸಂಪಾಜೆ ಗ್ರಾ.ಪಂ. ಹಾಗೂ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯ

0


ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಂಡಿ ಪೇಟೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್, ಲಯನ್ಸ್ ಕ್ಲಬ್ ಜಂಟಿ ಅಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ಅ.1ರಂದು ನಡೆಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ಸರ್ವರನ್ನು ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.


ನಿವೃತ ಸೈನಿಕರಾದ ಕೆ. ಪಿ. ಜಗದೀಶ್ ಶುಭಹಾರೈಸಿದರು‌. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಯೋಗಿಶ್ವರ್, ಸದಸ್ಯರುಗಳಾದ ಕಿಶೋರ್ ಕುಮಾರ್, ಪ್ರಶಾಂತ್, ನಳಿನಿ ಕಿಶೋರ್, ನವೀನ್ ಚಂದ್ರ. ವಾಸುದೇವ ಕಟ್ಟಮನೆ ,ಗಿರೀಶ್, ಧನಲಕ್ಷ್ಮೀ, ಕಿಶೋರ್ ಸ್ಪಾಟ್ ಕಂಪ್ಯೂಟರ್,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ಮಾಜಿ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ವಿಮಲಾ ಪ್ರಸಾದ್, ಅನುಪಮಾ, ಸುಶೀಲ, ವಿಜಯ ಕುಮಾರ್, ಸಂಜೀವಿನಿ ಒಕ್ಕೂಟದ ಕಾಂತಿ ಬಿ. ಎಸ್. ಸೌಮ್ಯ, ಯಶೋದಾ. ಪಶು ಸಖಿ ಮಾಲತಿ,ಆಶಾ ಕಾರ್ಯಕರ್ತರುಗಳಾದ ಆಶಾ ವಿನಯ್, ಪ್ರೇಮಲತಾ, ಸೌಮ್ಯ, ಅಂಗನವಾಡಿ ಕಾರ್ಯಕರ್ತರಾದ ಧರ್ಮಕಲಾ, ಪಂಚಾಯತ್ ಕಾರ್ಯದರ್ಶಿ ಪದ್ಮಾವತಿ ಪ್ರತಿಜ್ಞಾ ವಿಧಿ ಬೋದಿಸಿದರು ಪಂಚಾಯತ್ ಸಿಬ್ಬಂದಿಗಳಾದ ಗೋಪಮ್ಮ. ಮಧುರ, ಭರತ್, ಸವಿತಾ, ಭೋಜಪ್ಪ, ಉಮೇಶ್ ಉಪಸ್ಥಿತರಿದ್ದರು. ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ ಹನೀಫ್ ಸರ್ವರನ್ನು ವಂದಿಸಿದರು.