ವೆಲ್ನೆಸ್ ಅಂಡ್ ಡೈರೆಕ್ಟ್ ಸೆಲ್ಲಿಂಗ್ ಸರ್ಟಿಫಿಕೇಶನ್ ಕೋರ್ಸ್ ಪಡೆದ ಜಯಂತ್ ದೇವಶ್ಯ

0

ಬೆಂಗಳೂರಿನಲ್ಲಿರುವ
ಎಸ್ ಎಚ್ ಕೆ ವೆಲ್ನೆಸ್ ಫೌಂಡೇಶನ್ ನ ಆರೋಗ್ಯಕ್ಕೆ ಸಂಬಂಧಪಟ್ಟ ಒಂದು ವರ್ಷದ ವೆಲ್ನೆಸ್ ಅಂಡ್ ಡೈರೆಕ್ಟ್ ಸೆಲ್ಲಿಂಗ್ ಸರ್ಟಿಫಿಕೇಟ್‌ ಕೋರ್ಸ್ ನ್ನು ಪೂರೈಸಿ ಜಯಂತ್ ದೇವಶ್ಯ ಅವರು ಸೆ.24 ರಂದು ಸರ್ಟಿಫಿಕೇಟ್ ಪಡೆದಿರುವುದಾಗಿ ತಿಳಿದು ಬಂದಿದೆ.

ಕೋರ್ಸ್ ಮುಖಾಂತರ ಆರೋಗ್ಯದ ಬಗ್ಗೆ ಹಾಗೂ ಡೈರೆಕ್ಟ್ ಸೆಲ್ಲಿಂಗ್ ಇಂಡಸ್ಟ್ರಿಯ ಬಗ್ಗೆ ಶಿಕ್ಷಣ ಕೊಟ್ಟು ಜಾಗೃತಿ ಮೂಡಿಸಿ ಪ್ರತಿಯೊಬ್ಬರನ್ನು ಕೂಡ ಆರ್ಥಿಕವಾಗಿ ಬೆಳೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಹಾಗೂ . ಮನೆ ಮನೆಗೆ ಆರೋಗ್ಯ ತಲುಪಬೇಕು ಎನ್ನುವ ಕನಸನ್ನು ಹೊತ್ತಿರುವ ಎಸ್ ಎಚ್ ಕೆ ವೆಲ್ನೆಸ್ ಫೌಂಡೇಶನ್ ನ‌ ಉದ್ದೇಶ ಇಟ್ಟುಕೊಂಡಿರುವ ಸಂಸ್ಥೆ ಇದಾಗಿದೆ.
ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಸರ್ಟಿಫಿಕೇಟ್ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ಅಂದು ಜಯಂತ್ ದೇವಶ್ಯ ಅವರು ತಮ್ಮ ಕೋರ್ಸ್ ಸರ್ಟಿಫಿಕೇಟ್ ಪಡಕೊಂಡರು.
ವಿವಿಧ ರಾಷ್ಟ್ರಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಂತಹ‌ ನೈಟ್ ವುಡ್ ಹಾಗೂ ಭಾರತ ಉದ್ಯೋಗ ರತನ್ ಪ್ರಶಸ್ತಿಗಳನ್ನು ಪಡೆದುಕೊಂಡಿರುವಂತಹ ಡಾಕ್ಟರ್. ಎಸ್ ಹೆಚ್ ಕುಲಕರ್ಣಿ ರವರು ಸಂಸ್ಥೆಯ ಸ್ಥಾಪಕರಾಗಿದ್ದು ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡಕೊಂಡರು. ಜಯಂತ್ ಅವರು ಮಡಪ್ಪಾಡಿ ಗ್ರಾಮದ ದಿl ಶಿವರಾಮ ದೇವಶ್ಯ ಮತ್ತು ಶ್ರೀಮತಿ ದಮಯಂತಿ ದಂಪತಿಗಳ ಪುತ್ರ. ಗುತ್ತಿಗಾರಿನ ಮತ್ತಪ್ಪ ನಗರದ ದೇವಶ್ಯ ಕಮ್ಯೂನಿಕೇಶನ್ಸ್ ಮಾಲಕ.