ಮಕ್ಕಳಿಗೆ ಹೆತ್ತವರೇ ಆದರ್ಶಪ್ರಾಯರಾಗಬೇಕು : ನಾರಾಯಣ ಭಟ್ ರಾಮಕುಂಜ
ಒಳ್ಳೆಯ ಸಂಸ್ಕಾರಯುತ ಜೀವನವನ್ನು ಮನೆಯಲ್ಲಿ ಸೃಷ್ಟಿಸಿಕೊಟ್ಟು, ಒಳ್ಳೆಯ ವಿಚಾರಗಳನ್ನು ಮಕ್ಕಳ ಜೊತೆ ಹಂಚಿಕೊಂಡಾಗ ಮಕ್ಕಳು ಹೆತ್ತವರಂತೆ ಸಮಾಜದಲ್ಲಿ ಮುಂದುವರಿಯಲು ಸಾಧ್ಯ ಹಾಗಾದಾಗ ಮಕ್ಕಳಿಗೆ ಹೆತ್ತವರೇ ಆದರ್ಶ ಪ್ರಾಯರಾಗುತ್ತಾರೆ. ಇಂತಹ ಸಮಾಜ ನಿರ್ಮಾಣ ಮಾಡುವಲ್ಲಿ ಹೆತ್ತವರು ಶ್ರಮವಹಿಸಬೇಕು ಎಂದು ಲೇಖಕರು, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ನಾರಾಯಣ ಬಟ್ ರಾಮಕುಂಜ ಹೇಳಿದರು.
ಅವರು ಸೆ.೩೦ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ನಡೆದ ಶಿಕ್ಷಕ-ರಕ್ಷಕ ಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಪೋಷಕರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಹೆತ್ತವರು ಯಾವರೀತಿ ನಡೆದುಕೊಳ್ಳುತ್ತಾರೆಯೋ ಅದೇ ಗುಣವನ್ನು ಮಕ್ಕಳು ರೂಢಿಸಿಕೊಳ್ಳುತ್ತಾರೆ ಆದ್ದರಿಂದ ದುಶ್ಚಟಗಳಿಗೆ ಬಲಿಯಾಗದೇ, ಒಳ್ಳೆಯ ವಾತಾವರಣವನ್ನು ಮನೆಯಲ್ಲಿ ಸೃಷ್ಟಿಸಬೇಕು ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು. ವೇದಿಕೆಯಲ್ಲಿ ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ ಜಯಶ್ರೀ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಉದಯಶಂಕರ ಹೆಚ್, ಶಿಕ್ಷಕ-ರಕ್ಷಕ ಸಂಘದ ಸಂಚಾಲಕಿ ಡಾ ಲತಾ ಎನ್ ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಡಾ ಲತಾ ಎನ್ ಸ್ವಾಗತಿಸಿ ರಾಮಕೃಷ್ಣ ಕೆ ಎಸ್ ಅತಿಥಿಗಳ ಪರಿಚಯ ಮಾಡಿದರು. ಉದಯಶಂಕರ ಹೆಚ್ ವಂದಿಸಿದರು.ಧನರಾಜ್ ಬಿ.ಸಿ ಕಾರ್‍ಯಕ್ರಮ ನಿರೂಪಿಸಿದರು.