ಕೊಡಗು ಸಂಪಾಜೆ ಪಯಸ್ವಿನಿ ಸಹಕಾರಿ ಸಂಘದಿಂದ ದಬ್ಬಡ್ಕ ಶಾಲೆಗೆ ಕಂಪ್ಯೂಟರ್ ಕೊಡುಗೆ

0

ಕೊಡಗು ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಚೆಂಬು ಗ್ರಾಮದ ದಬ್ಬಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಸೆಟ್ಟನ್ನು ಕೊಡುಗೆಯಾಗಿ ಅ.2ರಂದು ನೀಡಲಾಯಿತು.

ಶಾಲಾ ವಿದ್ಯಾರ್ಥಿಗಳ ಆಧುನಿಕ ಶಿಕ್ಷಣದ ನೆರವಿಗಾಗಿ ಕಂಪ್ಯೂಟರ್ ಸಿಸ್ಟಮನ್ನು ಕೊಡುಗೆಯಾಗಿ ನೀಡಲಾಯಿತು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಜಿ.ಬೋಪಯ್ಯರವರ ಸಲಹೆಯನ್ನು ಪರಿಗಣಿಸಿ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅದ್ಯಕ್ಷರಾದ ಎನ್.ಸಿ. ಅನಂತ್ ಊರುಬೈಲು ಅವರು ಕೊಡುಗೆಯ ವ್ಯವಸ್ಥೆ ಮಾಡಿದ್ದರು.
ಅ.2ರಂದು ಗಾಂಧಿ ಜಯಂತಿ ಸಮಾರಂಭದಲ್ಲಿ ಸಹಕಾರಿ ಸಂಘದ ನಿರ್ದೇಶಕಿ ಶ್ರೀಮತಿ ಮನೋರಮಾ ಬೊಳ್ತಾಜೆ ರವರು ಶಾಲಾ ಮುಖ್ಯ ಶಿಕ್ಷಕಿರವರಿಗೆ ಕಂಪ್ಯೂಟರನ್ನು ಕೊಡುಗೆಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಗಿರೀಶ್ , ಶಾಲಾಭಿವೃದ್ಧಿ ಸಮಿತಿ ಅದ್ಯಕ್ಷೆ ಶ್ರೀಮತಿ ಭವಾನಿ ಕುಮಾರ್ ಮತ್ತು ಪುಂಡರೀಕರವರು ಉಪಸ್ಥಿತರಿದ್ದರು.