ಜೀ ಕನ್ನಡ ಸರಿಗಮಪ -20 ರ ಮೆಗಾ ಆಡಿಷನ್ ನಲ್ಲಿ ಸುಳ್ಯದ ಪಲ್ಲವಿ ಆರ್. ಕೆ. ಆಯ್ಕೆ

0

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸರಿಗಮಪ ಸೀಸನ್ -20 ರ ಮೆಗಾ ಆಡಿಷನ್ ನಲ್ಲಿ ಅಮರಮುಡ್ನೂರು ಗ್ರಾಮದ ಕೊಂಡೆಬಾಯಿ ಪಲ್ಲವಿ ಕೆ.ಆರ್ ಆಯ್ಕೆಯಾಗಿರುತ್ತಾರೆ. ವಿಶ್ವದಾದ್ಯಂತ ನಡೆಸಿದ ಆಡಿಷನ್ ನಲ್ಲಿ ಸುಮಾರು 1 ಲಕ್ಷ ಗಾಯಕರು ಬಾಗವಹಿಸಿದ್ದರು.
ಈ ಮೆಗಾ ಆಡಿಷನ್ ನಲ್ಲಿ ಪಲ್ಲವಿಯವರು ಸ್ಪರ್ಧಿಯಾಗಿ ಅದ್ಭುತ ಗಾಯನದ ಮೂಲಕ ತೀರ್ಪುಗಾರರಿಂದ ಮೆಚ್ಚುಗೆ ಪಡೆದು ಆಯ್ಕೆಯಾದರು. ಇವರು ಅಮರಮುಡ್ನೂರು ಗ್ರಾಮದ ಹಿರಿಯಡ್ಕದ ಮೆಸ್ಕಾಂ ಉದ್ಯೋಗಿ ಕೊಂಡೆಬಾಯಿ ರಾಮಣ್ಣ ಗೌಡ ಮತ್ತು ಅನಿತಾ ದಂಪತಿಯ ಪುತ್ರಿ. ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುತ್ತಾರೆ.