ಕೆ.ಎಸ್.ಪೂಜಾರಿ ನಿಧನ

0

ಐವರ್ನಾಡು ಗ್ರಾಮದ ಕುಂಞಮೂಲೆ ಕೆ.ಎಸ್.ಪೂಜಾರಿಯವರು ಅಲ್ಪ ಕಾಲದ ಅಸೌಖ್ಯದಿಂದ ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ಅ.9 ರಂದು ನಿಧನರಾದರು.
ಅವರಿಗೆ 60 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಅನಿತ,ಪುತ್ರಿಯರಾದ ಶ್ರೀಮತಿ ಮೌಲ್ಯ,ಶ್ರದ್ಧಾ ,ಅಳಿಯ,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.
ಬಿಲ್ಲವ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದ ಇವರು ಐವರ್ನಾಡು ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.