ಸುಬ್ರಹ್ಮಣ್ಯ : ಕಾರಿನ ಗಾಜು ಒಡೆದು ಚಿನ್ನ ಕದ್ದವನ ಬಂಧನ

0


ಪೋಲಿಸರ ಮಿಂಚಿನ ಕಾರ್ಯಾಚರಣೆ

ಸುಬ್ರಹ್ಮಣ್ಯದ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಕಳ್ಳತನ ಮಾಡಿದ್ದ ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಜೈಲಿಗಟ್ಟಿದ ಘಟನೆ ವರದಿಯಾಗಿದೆ.

ಅ.೯ ರಂದು ಸುಬ್ರಹ್ಮಣ್ಯ ಪಾರ್ಕಿಂಗ್ ಸ್ಥಳದಲ್ಲಿ ಕಾರಿನಿಂದ ಗಾಜು ಒಡೆದು ಚಿನ್ನ ಕಳ್ಳತನ ಮಾಡಿದ ಅರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿರುವುದಾಗಿ ವರದಿಯಾಗಿದೆ.
ಸುಬ್ರಹ್ಮಣ್ಯ ಠಾಣೆಯ ಎಸ್ ಐ ಕಾರ್ತಿಕ್ ಹಾಗೂ ಕ್ರೈಂ ಎಸ್ ಐ ಮುರಳಿಧರ ನಾಯಕ್ ನೇತೃತ್ವದಲ್ಲಿ ಎ.ಎಸ್ ಐ ಕರುಣಾಕರ ಹಾಗೂ ಸಿಬ್ಬಂಧಿಗಳು ಸೇರಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಪೊಲೀಸರ ಎರಡು ತಂಡ ರಚಿಸಿ ಆರೋಪಿಯನ್ನು ಹಿಡಿಯಲು ಬಲೆ ಬೀಸಿದ್ದರು.
.ಸಿ.ಸಿ ಕ್ಯಾಮಾರಾ ಫೂಟೇಜ್ ತೆಗೆದು ಟ್ರೇಸ್ ಮಾಡಲಾಗಿತ್ತು.


ಪ್ರಭಾಕರ ಹೊನ್ನವಳ್ಳಿ ಆರೋಪಿಯಾಗಿದ್ದು, ಈತನ ಮೇಲೆ ಹೊನ್ನವಳ್ಳಿ ಸೇರಿದಂತೆ ಬೇರೆ ಬೇರೆ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ದೇವಸ್ಥಾನ ಗಳಿಗೆ ಹೋಗಿ ಉಪಾಯದಿಂದ ಯಾರು ಇಲ್ಲದ ಸಮಯ ನೋಡಿಕೊಂಡು ಲೋಹದಂತ ಆಯುಧಗಳನ್ನು ಬಳಸಿ ಕಾರಿನ ಗಾಜುಗಳನ್ನು ಪುಡಿ ಮಾಡಿ ಬೇಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುವ ಚಾಳಿ ಬೆಳೆಸಿಕೊಂಡಿಸಿರುವುದಾಗಿ ತಿಳಿದು ಬಂದಿದೆ. ಸುಬ್ರಹ್ಮಣ್ಯದಲ್ಲಿ ಈತ ಈ ಹಿಂದೆಯೂ ಒಮ್ಮೆ ಕಳ್ಳತನ ಮಾಡಿದ್ದು ಇತ್ತೀಚೆಗೆ ಧರ್ಮಸ್ಥಳದಲ್ಲೂ ಕಳ್ಳತನ ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಅರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನವಾಗಿರುವುದಾಗಿ ತಿಳಿದು ಬಂದಿದೆ. ಆರೋಪಿಯಿಂದ ಕಳ್ಳತನ ಮಾಡಿದ ಕೆಲ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.