ಅ. 15 -24 : ಪುತ್ತೂರು ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0


ಅ. 15 ರಂದು ತುಲಾಭಾರ ಸೇವೆ, ಅ. 22 ರಂದು ಚಂಡಿಕಾಯಾಗ

ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಇರುವ ಶ್ರೀ ಲಕ್ಷ್ಮೀ ದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಬಳಿ ಅ. 15 ರಿಂದ 24ರವರೆಗೆ ನವರಾತ್ರಿ ಉತ್ಸವ ನಡೆಯಲಿದೆ.
ಅ. 15 ರಂದು ಬೆಳಿಗ್ಗೆ ಗಣಪತಿ ಹೋಮ, ಪಾಷಾಣಮೂರ್ತಿಗೆ ತಂಬಿಲ, ನಾಗದೇವರಿಗೆ ತಂಬಿಲ, ಗುಳಿಗನಿಗೆ ತಂಬಿಲ ನಡೆದ ಬಳಿಕ ತುಲಾಭಾರ ಸೇವೆ ನಡೆಯಲಿದೆ. ಪೂ. 11 ರಿಂದ ವಜ್ರಮಾತಾ ಮಹಿಳಾ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. , ರಾತ್ರಿ 7-30 ರಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.


ಅ. 16ರಂದು ಪೂರ್ವಾಹ್ನ ಯಕ್ಷತರಂಗ ಪೆರ್ಲ ಇವರಿಂದ ವಿಶೇಷ ಪ್ರಸಂಗ ಕದಂಬ ಕೌಶಿಕೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಭಜನಾ ಕಾರ್ಯಕ್ರಮ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಅ. 17ರಂದು ಬೆಳಿಗ್ಗೆ ಚಂದ್ರಶೇಖರ ಮತ್ತು ಬಳಗ ಮೂಡಾಯೂರು ಇವರಿಂದ ಸ್ಯಾಕ್ಸೋಫೊನ್ ವಾದನ, ನಂತರ ಮಹಾಪೂಜೆ, ದೇವಿದರ್ಶನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ರಾತ್ರಿ ವಿದುಷಿ ಪವಿತ್ರ ರೂಪೇಶ್ ಮತ್ತು ಬಳಗ ಕೊಂಬೆಟ್ಟು ಇವರಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಅ. 18 ರಂದು ಬೆಳಿಗ್ಗೆ ಅಕ್ಷರಾಭ್ಯಾಸ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಶ್ರೀ ಲಕ್ಷ್ಮೀದೇವಿ ಭಕ್ತ ವೃಂದದವರಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಅ. 19 ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 4 ರಿಂದ ಶ್ರೀ ದೇವಿ ಪಾರಾಯಣ, ರಾತ್ರಿ ಶ್ರೀ ಲಕ್ಷ್ಮೀದೇವಿ ಭಕ್ತ ವೃಂದದವರಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಅ. 20 ರಂದು ಬೆಳಿಗ್ಗೆ ಗಾನಸಿರಿ ಕಲಾಕೇಂದ್ರ ಪುತ್ತೂರು ಇವರಿಂದ ಭಜನಾ ಕಾರ್ಯಕ್ರಮ, ನಂತರ ಮಹಾಪೂಜೆ, ದೇವಿದರ್ಶನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಅ. 21 ರಂದು ಬೆಳಿಗ್ಗೆ ಗಂಟೆ ಶ್ರೀ ಮಹಾವಿಷ್ಣು ಮಕ್ಕಳ ಕುಣಿತ ಭಜನಾ ತಂಡ ಸುಳ್ಯಪದವು ಇವರಿಂದ ಕುಣಿತ ಭಜನೆ, ನಂತರ ಮಹಾಪೂಜೆ, ದೇವಿದರ್ಶನ, ದೇವರಿಗೆ ಹೊಸಅಕ್ಕಿ ನೈವೇದ್ಯ ಸಮರ್ಪಣೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ರಾತ್ರಿ ಪ್ರಾಮಲತಾ ಮತ್ತು ಬಳಗ ಶ್ರೀದೇವಿ ನಿಲಯ ಕಟ್ಟೆ ಇವರಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಅ. 22 ರಂದು ಬೆಳಿಗ್ಗೆ ಗಣಪತಿ ಹೋಮ, ನಂತರ ಚಂಡಿಕಾಯಾಗ, ಬಳಿಕ ಪದ್ಮನಾಭ ಅರಿಯಡ್ಕ ಇವರಿಂದ ಸ್ಯಾಕ್ಸೋಫೊನ್ ವಾದನ, ಮಧ್ಯಾಹ್ನ ಚಂಡಿಕಾಯಾಗ ಪೂರ್ಣಾಹುತಿ, ನಂತರ ಮಹಾಪೂಜೆ, ದೇವಿದರ್ಶನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಸ್ಫೂರ್ತಿ ಯುವಕ, ಯುವತಿ ಮಂಡಲ ಬನ್ನೂರು ಇವರಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಅ. 23 ಬೆಳಿಗ್ಗೆ ವಿದ್ಯಾಸಾಗರ್ ಕಲಾಶಾಲೆ ಕುಕ್ಕೆ ಸುಬ್ರಹ್ಮಣ್ಯ ಇವರಿಂದ ಭಜನಾ ಕಾರ್ಯಕ್ರಮ, ನಂತರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಆಯುಧ ಪೂಜೆ, ರಾತ್ರಿ ಶ್ರೀ ಲಕ್ಷ್ಮೀದೇವಿ ಭಕ್ತ ವೃಂದದವರಿಂದ ಭಜನಾ ಕಾರ್ಯಕ್ರಮ., ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಅ. 24 ಬೆಳಿಗ್ಗೆ ಎಲ್.ಆರ್.ವಿಜಯರಂಗ, ಸದ್ವಿದ್ಯಾ ಸಂಗೀತಾಲಯ ಬೆಂಗಳೂರು ಇವರಿಂದ ಭಜನಾ ಕಾರ್ಯಕ್ರಮ, ನಂತರ ಮಹಾಪೂಜೆ, ದೇವಿದರ್ಶನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.