ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್
ಸ್ಥಳೀಯ ಸಂಸ್ಥೆ ಸುಳ್ಯ ಮತ್ತು ಸ .ಪ.ಪೂ.ಕಾಲೇಜು. ಸುಳ್ಯದ ಸಹಯೋಗದಲ್ಲಿ ಅ.9 ಮತ್ತು 10
ರಂದು ಪಟಾಲಂ ಮತ್ತು ಷಟ್ಕಾನಾಯಕರ ತರಬೇತಿ ಶಿಬಿರ ನಡೆಯಿತು.
ಸಮಾರೋಪ ಸಮಾರಂಭ ಅ. 10 ರಂದು ಅಪರಾಹ್ನ ಶಿಬಿರಾಗ್ನಿ ಕಾರ್ಯಕ್ರಮದೊಂದಿಗೆ ನಡೆಯಿತು.
ಜೂಲ್ ಗಳಿಂದ ಅಗ್ನಿ ಸ್ಪರ್ಶ ವಾದ
ಶಿಬಿರಾಗ್ನಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕಿ ಶ್ರೀಮತಿ ವಾಹಿನಿಯವರು ಉದ್ಘಾಟಿಸಿದರು.
ಶಿಭಿರಾಗ್ನಿ ಗೀತೆಯನ್ನು ಶ್ರೀಮತಿ ರೇವತಿ ಹಾಗೂ ಶ್ರೀಮತಿ ಪ್ರೇಮಲತಾ ಎ.ಹೆಚ್ ಹಾಡಿಸಿದರು. ಭಾಗವಹಿಸಿದ ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಅತಿಥಿಗಳು ವಿತರಿಸಿ ಪ್ರೋತ್ಸಾಹಿಸಿದರು. ಸ್ಕೌಟ್ ಪವನ್ ಸವೇರಪುರ ಶಾಲೆ ,ಗೈಡ್ ಅಂಜಲಿ ಸ.ಉ.ಹಿ.ಪ್ರಾ.ಶಾಲೆ. ಜಾಲ್ಸೂರು ಹಾಗೂ ಸ್ಕೌಟರ್ ಜೀವನ್ ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಣ ಸಂಯೋಜಕರಾದ ಶ್ರೀಮತಿ ನಳಿನಿ ಹಾಗೂ ಶ್ರೀಮತಿ ಸಂಧ್ಯಾ ಕುಮಾರಿ ಶಿಭಿರಾರ್ಥಿಗಳಿಗೆ ಶುಭಹಾರೈಸಿದರು. ಸ.ಪ.ಪೂ.ಕಾಲೇಜು ಸುಳ್ಯ ದ ಉಪಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯರು ಹಿತನುಡಿಗಳನ್ನಾಡಿದರು.
ಶಿಬಿರಾರ್ಥಿಗಳಿಗಳು ವಿವಿಧ ಕಾರ್ಯಕ್ರಮಗಳನ್ನು ನೀಡಿ ಸಂತೋಷಿಸಿದರು. ಶಶಿಧರ್ ಎಂ.ಜೆ.ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.ಉಪಾಧ್ಯಕ್ಷರಾದ ಮಾಧವ ಗೌಡ, ರಾಜುಪಂಡಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ನಳಿನಾಕ್ಷಿ ಕಾರ್ಯಕ್ರಮ ನಡೆಸಿಕೊಟ್ಟರು.ಶ್ರೀ ಹರಿ ಪೈಂದೋಡಿ ಹಾಗೂ ರೇಂಜರ್ಸ್, ರೋವರ್ಸ್ ಸಹಕರಿಸಿದರು. ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಶ್ರೀಮತಿ ರೇವತಿ ವಂದಿಸಿದರು.