ಸುಳ್ಯ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟದ ಕುರಿತು ಪೋಷಕರೊಂದಿಗೆ ಪೂರ್ವಭಾವಿ ಸಭೆ

0

ಸುಳ್ಯದ ಎಂ.ಜಿ.ಎಂ. ಶಾಲಾ ಕ್ರೀಡಾಂಗಣದಲ್ಲಿ ಅ.26 ಹಾಗೂ ಅ.27ರಂದು ನಡೆಯಲಿರುವ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಟ್ಟದ ಕ್ರೀಡಾ ಕೂಟದ ಬಗ್ಗೆ ಪೋಷಕರ ಜತೆ ಪೂರ್ವಭಾವಿ ಸಭೆಯು ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ಕಲಾಮಂದಿರದಲ್ಲಿ ಅ.13ರಂದು ನಡೆಯಿತು.

ಸಭೆಯಲ್ಲಿ ಕ್ರೀಡಾಕೂಟದ ಕುರಿತು ಪೂರ್ವ ತಯಾರಿ, ವಿವಿಧ ಸಮಿತಿಗಳನ್ನು ರಚಿಸುವ ಕುರಿತು ಪೋಷಕರಲ್ಲಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಸೈಂಟ್ ಜೋಸೆಫ್ ಶಾಲಾ ಸಂಚಾಲಕ ರೆ.ಫಾ. ವಿಕ್ಟರ್ ಡಿ’ಸೋಜಾ, ಸೈಂಟ್ ಜೋಸೆಫ್ ಶಾಲಾ ಮುಖ್ಯೋಪಧ್ಯಾಯಿನಿ ಶ್ರೀಮತಿ ಬಿನೋಮ,ಪೋಷಕರ ಸಂಘದ ಅಧ್ಯಕ್ಷ ಜೆ.ಕೆ ರೈ ಸುಳ್ಯ, ಸೈಂಟ್ ಬ್ರಿಜಿಡ್ಸ್ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೋ, ಸೈಂಟ್ ಬ್ರಿಜಿಡ್ಸ್ ಶಾಲಾ ಮುಖ್ಯೋಪಧ್ಯಾಯಿನಿ ಶ್ರೀಮತಿ ಅಂತೋನಿ ಮೇರಿ, ಶಿಕ್ಷಕರಾದ ಕೊರಗಪ್ಪ, ಉಮೇಶ್ , ದೈಹಿಕ ಶಿಕ್ಷಕಿ ಭವ್ಯ, ಪೋಷಕರ ಸಮಿತಿ ಅಧ್ಯಕ್ಷರು ಹಾಗೂ ಪೋಷಕರು ಉಪಸ್ಥಿತರಿದ್ದರು.