ಕಲ್ಲುಗುಂಡಿ: ಕೂಲಿಶೆಡ್ ಹೋಟೆಲ್ ಒಳಗೆ ಅವಿತಿದ್ದ ಹತ್ತು ಅಡಿ ಉದ್ದದ ಹೆಬ್ಬಾವು ಸೆರೆ

0

ಹೋಟೆಲ್ ಒಂದರ ಒಳಗೆ ಪ್ರಿಡ್ಜ್ ಕೆಳಗೆ ಅವಿತಿದ್ದ ಸುಮಾರು ಹತ್ತು ಅಡಿ ಉದ್ದದ ಹೆಬ್ಬಾವನ್ನು ಸೆರೆಹಿಡಿದು ದೇವರಕೊಲ್ಲಿ ಸಮೀಪದ ಕಾಡಿಗೆ ಬಿಟ್ಟ ಘಟನೆ ಅ.13ರಂದು ರಾತ್ರಿ ಕಲ್ಲುಗುಂಡಿಯ ಕೂಲಿಶೆಡ್ ನಲ್ಲಿ ಸಂಭವಿಸಿದೆ.

ಕಲ್ಲುಗುಂಡಿಯ ಕೂಲಿಶೆಡ್ ನಲ್ಲಿರುವ ಲತೀಫ್ ಅವರ ಮಾಲಕತ್ವದ ಅರಫ ಹೋಟೆಲಿನ ಒಳಗೆ ಫ್ರಿಡ್ಜ್ ಅಡಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಂಡು ಬಂದಿದ್ದು, ವಿಷಯ ತಿಳಿದು ಸ್ಥಳೀಯರಾದ ಶರತ್ ಕೀಲಾರು ಸಂಪಾಜೆ ಮತ್ತು ಕಾರ್ತಿಕ್ ಪೇರಡ್ಕ ಎಂಬವರು ಬಂದು ಸ್ಥಳೀಯರಾದ ಲತೀಫ್, ಹನೀಫ್, ಉಮ್ಮರ್ ಅವರ ಸಹಕಾರದೊಂದಿಗೆ ಹಾವನ್ನು ಸುರಕ್ಷಿತವಾಗಿ ಹಿಡಿದು ದೇವರಕೊಲ್ಲಿ ಸಮೀಪದ ಕಾಡಿಗೆ ಬಿಟ್ಟರೆಂದು ತಿಳಿದುಬಂದಿದೆ.