
ಸುಳ್ಯ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘಟನೆಯ ಕಚೇರಿ ಪೈಚಾರಿನಲ್ಲಿ ಕಾರ್ಯಚರಿಸುತ್ತಿದ್ದು ಅ 16ರಂದು ಸುಳ್ಯ ರಥ ಬೀದಿಯ ಪಂಡಿತ್ ಕಾಂಪ್ಲೆಕ್ಸ್ ನ ಎರಡನೆಯ ಮಹಡಿಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.








ನೂತನ ಕಚೇರಿಯನ್ನು ಜಿಲ್ಲಾ ಹೈನುಗಾರಿಕೆ ಪ್ರಶಸ್ತಿ ವಿಜೇತ ರೈತ ಸಂಘದ ಹಿರಿಯ ಸದಸ್ಯ ಪುರುಷೋತ್ತಮ ಕೊಯಿಕುಳಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತಾಲೂಕು ಸಮಿತಿಯ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಕಾರ್ಯದರ್ಶಿ ಭರತ್ ಕುಮಾರ್, ಉಪಾಧ್ಯಕ್ಷ ತೀರ್ಥರಾಮ ಉಳುವಾರು, ಜಿಲ್ಲಾ ಸಮಿತಿ ಉಪಾಧ್ಯಕ್ಷ ದಿವಾಕರ ಪೈ, ಗೌರವಾಧ್ಯಕ್ಷ ಪದ್ಮನಾಭ ಗೌಡ ಐವರ್ನಾಡು, ಕಟ್ಟಡ ಮಾಲಕ ಕೆ ಗೋಕುಲ್ ದಾಸ್, ಜೊತೆ ಕಾರ್ಯದರ್ಶಿ ಚೆನ್ನಕೇಶವ ಆಲಟ್ಟಿ, ಸಮಿತಿಯ ಮುಖಂಡರಾದ ಶ್ರೀಧರ್ ಕೊಯ್ಕೊಳಿ, ವಸಂತ ಪೆಲ್ತಡ್ಕ, ತೀರ್ಥರಾಮ ಬಾಳೆಕಜೆ, ಸಂಕಪ್ಪ ಗೌಡ, ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.









